Coastal Bulletin

ಬಂಟ್ವಾಳ: ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಯಪದವು  ಶ್ರೀ ಕಡಂಬಿಲ್ತಾಯಿ, ಕೊಡಮಣಿತ್ತಾಯಿ, ಬ್ರಹ್ಮ ಬದರ್ಕಳ ಗರೊಡಿ ಕ್ಷೇತ್ರದಲ್ಲಿ ಶ್ರೀ ಬ್ರಹ್ಮ ಬದರ್ಕಳ ಜಾತ್ರೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಫೆ.13ರಿಂದ ಫೆ.16ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ  ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.  

ಫೆ.13 ರಂದು ಸಂಜೆ ಬಾರ‍್ದಡ್ಡು ಗುತ್ತಿನಿಂದ ಕಡಂಬಿಲ್ತಾಯಿ, ಕೊಡಮಣಿತ್ತಾಯಿ ದೈವಗಳ ಭಂಡಾರ ಬರುವುದು, ಕಕ್ಯಗುತ್ತುವಿನಿಂದ ದೈವೊಂಕುಳ ಭಂಡಾರ ಬಂದು  ನವಕ ಕಲಶ ಪ್ರಧಾನ ಹೋಮ, ಧ್ವಜಾರೋಹಣ, ಗ್ರಾಮ ಸಂಕ್ರಾಂತಿ ಸೇವೆ. ರಾತ್ರಿ  ದೈವೊಂಕುಲ ನೇಮೋತ್ಸವ.ಫೆ.14ರಂದು ಸಂಜೆ ಕಡಂಬಿಲ್ತಾಯಿ ಕೊಡಮಣಿತ್ತಾಯಿ ದೈವಗಳ ಬಲಿ ಮತ್ತು ನೇಮೋತ್ಸವ

ನಡೆಯಲಿದೆ. ಫೆ.೧೫ರಂದು ಬೆಳಗ್ಗೆ ಶ್ರೀ ಸೂಕ್ತ ಹೋಮ, ಸಂಜೆ ಬದೆರ್‌ಗಳು ಗರೊಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ತುಳು ನಾಟಕ ಪ್ರದರ್ಶನ, ಮಾಣಿಬಾಲೆ ನೇಮೋತ್ಸವ ನಡೆಯಲಿದೆ.  

ಫೆ.16ರ ಬೆಳಗ್ಗೆ ಶ್ರೀ ಕೊಡಮಣಿತ್ತಾಯ ಸ್ಥಾನದಲ್ಲಿ  ನವಕಕಲಶ ಪ್ರಧಾನ ಹೋಮ, ಹೂವಿನ ಪೂಜೆ,     ಕೊಡಮಣಿತ್ತಾಯ ದೈವದ  ನೇಮೋತ್ಸವ ನಡೆಯಲಿದೆ

Leave a Comment