Coastal Bulletin

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೊಯಿಡಾ ತಾಲೂಕಿನ ಕಾರ್ಟೊಳಿ ಗ್ರಾಮದ ಮಹಾದೇವ ಬುದೋ ವೇಳಿಪ ಇಂದು ನಿಧನರಾಗಿದ್ದಾರೆ.

ಹಕ್ಕಿಗಳ ಕೂಗನ್ನು ಕೇಳಿಕೊಂಡು ಸಮಯ ಹೇಳುವ ಇವರು,ಬುಡಕಟ್ಟು ಸಂಸ್ಕೃತಿ ಮತ್ತು ಕಲೆಯಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಪರಿಸರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಇದಕ್ಕಾಗಿ ಇವರಿಗೆ 2021

ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

 ಇವರಿಗೆ ಮೂವರು ಗಂಡು ಮಕ್ಕಳು ಮತ್ತು ನಾಲ್ವರು ಹೆಣ್ಣು ಮಕ್ಕಳು. ಪತ್ನಿ ಮತ್ತು ಹಿರಿಯ ಮಗನನ್ನು ಬಹಳ ವರ್ಷಗಳ‌ ಹಿಂದೆಯೇ ನಿಧನರಾಗಿದ್ದಾರೆ.

Leave a Comment