ಬಂಟ್ವಾಳ :ಜ.11ರಂದು ಬಂಟವಾಳ ಬಂಟರ ಸಂಘದ ಅಶ್ರಯದಲ್ಲಿ "ಕ್ರೀಡೋತ್ಸವ"

Coastal Bulletin
ಬಂಟ್ವಾಳ :ಜ.11ರಂದು ಬಂಟವಾಳ ಬಂಟರ ಸಂಘದ ಅಶ್ರಯದಲ್ಲಿ "ಕ್ರೀಡೋತ್ಸವ"

ಬಂಟ್ವಾಳ :ಬಂಟರ ಸಂಘ ಬಂಟವಾಳ ತಾಲೂಕು (ರಿ) ಇದರ ನೇತೃತ್ವದಲ್ಲಿ ಬಂಟವಾಳ ತಾಲೂಕಿನ ಎಲ್ಲಾ ವಲಯ ಬಂಟರ ಸಂಘಗಳ ಸಹಯೋಗದೊಂದಿಗೆ "ಕ್ರೀಡೋತ್ಸವ"ವು "ಬಂಟವಾಳದ ಬಂಟರ ಭವನ”ದ ವಠಾರದಲ್ಲಿ ಜ. 11ರಂದು ಆದಿತ್ಯವಾರ ನಡೆಯಲಿದೆ.

ಬೆಳಿಗ್ಗೆ 9ಕ್ಕೆ ಕ್ರೀಡೋತ್ಸವದ ಉದ್ಘಾಟನೆಯನ್ನು ಸದಾನಂದ ಭಂಡಾರಿ, ಉದ್ಯಮಿಗಳು, ಬೆಂಗಳೂರು ನೆರವೇರಿಸಲಿದ್ದಾರೆ,ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉಪಸ್ಥಿತರಿರುವರು.

ಸಂಜೆ ಗಂಟೆ 4ಕ್ಕೆಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಗನ್ನಾಥ ಚೌಟ ಬದಿಗುಡ್ಡೆ ಅಧ್ಯಕ್ಷರು, ಬಂಟರ ಸಂಘ ಬಂಟವಾಳ ತಾಲೂಕು (ರಿ.)ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಮಂಗಳೂರು ಸಂಸದ ಕ್ಯಾಪ್ಟನ್

ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ತಾಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಹರೀಶ್ ಶೆಟ್ಟಿ, ಲ| ಉಮೇಶ್ ಎಂ ಶೆಟ್ಟಿ 'ಭೂಮಿ' ಮಾಣಿ ಸಾಗು ಉಪಸ್ಥಿತರಿರುವರು.

ಕ್ರೀಡೋತ್ಸವ ಬೆಳಗ್ಗೆ ಘಂಟೆ 9:00ಕ್ಕೆ ಉದ್ಘಾಟನೆಗೊಂಡು ಸಂಜೆ ಘಂಟೆ 4:00ಕ್ಕೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Leave a Comment