ಬಂಟ್ವಾಳ :ಶ್ರೀ ದುರ್ಗಾ ಮಿತ್ರ ಮಂಡಳಿ ಮತ್ತು ಶ್ರೀ ನಿಧಿ ಮಾತೃ ಮಂಡಳಿ ಶ್ರೀ ರಾಮನಗರ, ಬೆಂಜನಪದವು ಇದರ ಆಶ್ರಯದಲ್ಲಿ ವಾರ್ಷಿಕೋತ್ಸವ ಮತ್ತು ಅರ್ಧ ಏಕಾಪ ಭಜನಾ ಮಂಗಳೋತ್ಸವವು ಜ.13 ಹಾಗೂ 14ರಂದು ನಡೆಯಲಿದೆ.
ಜ.13ರಂದು ಶನಿವಾರ ಬೆಳಿಗ್ಗೆ 07.00 ಗಂಟೆಗೆ ಗಣಹೋಮ, ಸಂಜೆ 4ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಬಳಿಕ ಸಭಾ ಕಾರ್ಯಕ್ರಮ ಹಾಗೂ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ,
ಕಲಾತಪಸ್ವಿ ಸಾಂಸ್ಕೃತಿಕ ತಂಡ, ಧರ್ಮನಗರ-ವಿಟ್ಲ. ಇವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಜ.14ರಂದು ಆದಿತ್ಯವಾರ ಬೆಳಿಗ್ಗೆ 7ರಿಂದ ಅರ್ಧ ಏಕಾಹ ಭಜನಾ ಮಹೋತ್ಸವ ಹಾಗೂ ಸಂಜೆ 7ಕ್ಕೆ ಮಂಗಳೋತ್ಸವ ಜರುಗಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














