ಬಂಟ್ವಾಳ: ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ್ ಮಹಿಳಾ ಸಂಘ ಇದರ ಜಂಟಿ ಆಶ್ರಯದಲ್ಲಿ ಆಟಿಡೊಂಜಿ ಗಮ್ಮತ್ ಕಾರ್ಯಕ್ರಮ ತುಂಬೆಯ ಮುದಲ್ಮೆಯಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಕಾರ ಭಾರತಿಯ ಜಿಲ್ಲಾಧ್ಯಕ್ಷ ಟಿ. ತಾರಾನಾಥ ಕೊಟ್ಟಾರಿ, ಹೊಟೇಲ್ ಉದ್ಯಮಿ ಸದಾನಂದ ಶೆಟ್ಟಿ, ರೋಟರಿ ಕ್ಲಬ್ ಬಿ.ಸಿ. ರೋಡು ಸಿಟಿಯ ಕಾರ್ಯದರ್ಶಿ ಆಶಾಮಣಿ ರೈ ಭಾಗವಹಿಸಿದ್ದರು. ಈ ಸಂದರ್ಭ ಹಿಂದು ಜಾಗರಣ ವೇದಿಕೆ ಬೊಳ್ಳಾರಿ ಘಟಕದ ವತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ
ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಿತ್ರನಟಿ ನವ್ಯಾ ಪೂಜಾರಿ, ಚಿತ್ರನಟರಾದ ಮಂಜು ರೈ, ಸಂಪತ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.
ಕಬಡ್ಡಿ, ವಾಲಿಬಾಲ್, ಲಗೋರಿ, ಗೋಲಿಯಾಟ, ಮಡಿಕೆ ಹೊಡೆತ ಹಗ್ಗಜಗ್ಗಾಟ ಮಾತ್ರವಲ್ಲದೆ ವಿವಿಧ ಮನೋರಂಜನಾ ಆಟಗಳು ನಡೆದವು. ಮಧ್ಯಾಹ್ನ ಭೋಜನಕ್ಕೆ ೩೦ ವಿವಿಧ ಬಗೆಯ ತಿನಿಸುಗಳನ್ನು ಸಮಘದ ಸದಸ್ಯರು ತಯಾರಿಸಿ ತಂದಿದ್ದರು. ಮಹಿಳೆಯರು ಮಕ್ಕಳು ಕೆಸರುಲ್ಲಿ ಆಟವಾಡಿ ಸಂಭ್ರಮಿಸಿದರು.
















