Coastal Bulletin

ಬಂಟ್ವಾಳ :ನೆತ್ತರಕೆರೆ ಹಿಂದೂ ಜಾಗರಣ ವೇದಿಕೆ, ನವೋದಯ ಘಟಕದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಬಿ ಸಿ ರೋಡ್ ನಲ್ಲಿ ಜರಗುವ ಅಖಂಡ ಭಾರತ ಸಂಕಲ್ಪ ದಿನದ ಪೂರ್ವಭಾವಿಯಾಗಿ ಭಾರತ್ ಮಾತಾ ಪೂಜನಾ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಚೆನ್ನೈ ತೋಡಿ ಮಂಡಲ ಪ್ರಮುಖರಾದ ಹರೀಶ್ ನೈನಾಡು ಇವರು ಭೌದಿಕ್ ನಡೆಸಿಕೊಟ್ಟರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಇಂದು ಯುವ ವಾಹಿನಿ ಪ್ರಮುಖರಾದ

ತಿಲಕ್ ರಾಜ್ ಇವರು ಉಪಸ್ಥಿತರಿದ್ದರು.

ಗಣ್ಯರು ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು.ಈ ಸಂಧರ್ಭದಲ್ಲಿ ಹಿಂ.ಜಾ.ವೇ.ಜಿಲ್ಲಾ,ತಾಲೂಕು,ವಲಯ ಪ್ರಮುಖರು ಪರಿವಾರ ಸಂಘಟನೆಯ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.

Leave a Comment