ಬಂಟ್ವಾಳ :2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಎ.09ರಂದು ಪ್ರಕಟಗೊಂಡಿದ್ದು 348 ವಿದ್ಯಾರ್ಥಿಗಳಲ್ಲಿ 338 ವಿದ್ಯಾರ್ಥಿಗಳು ತೇರ್ಗಡೆಗೊಂಡು 97% ಫಲಿತಾಂಶ ಸಾಧಿಸಿದೆ.
ಕಲಾ ವಿಭಾಗದಲ್ಲಿ 27 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 203 ವಿದ್ಯಾರ್ಥಿಗಳಲ್ಲಿ 198 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 118 ವಿದ್ಯಾರ್ಥಿಗಳಲ್ಲಿ 116 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪ್ರೀತೇಶ್ 600ರಲ್ಲಿ 594 ಅಂಕ ಪಡೆದು ಪ್ರಥಮ ಸ್ಥಾನವನ್ನು, ಶ್ರೀ ವಿದ್ಯಾ 600ರಲ್ಲಿ 589 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ
ವಿಭಾಗದಲ್ಲಿ ವಾಸವಿ ಕೆ ಸಿ ಹಾಗೂ ಭೂಷಣ್ 600ರಲ್ಲಿ 593 ಅಂಕ ಪಡೆದು ಪ್ರಥಮ ಸ್ಥಾನವನ್ನು, ಸಾಯಿಶಾ 600ರಲ್ಲಿ 586 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಶ್ರೇಯಾ ಸಿ ಯಸ್ 600ರಲ್ಲಿ 569 ಅಂಕ ಪಡೆದು ಪ್ರಥಮ ಸ್ಥಾನವನ್ನು, ಇಂಚರಾ ಸುರೇಶ್ ಗೌಡ 600ರಲ್ಲಿ 563 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.















