ಬಿ.ಸಿ.ರೋಡ್‌: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಆರ್ಟ್ ಅಂಡ್ ಕ್ರಾಫ್ಟ್ ಎಕ್ಸಿಬಿಷನ್ ಹಾಗೂ ಕಿಡಝೋನ್ ಫುಡ್ ಫೆಸ್ಟಿವಲ್.

Coastal Bulletin
ಬಿ.ಸಿ.ರೋಡ್‌: ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ಆರ್ಟ್ ಅಂಡ್ ಕ್ರಾಫ್ಟ್ ಎಕ್ಸಿಬಿಷನ್ ಹಾಗೂ ಕಿಡಝೋನ್ ಫುಡ್ ಫೆಸ್ಟಿವಲ್.

ಬಂಟ್ವಾಳ :ಬಿ.ಸಿ.ರೋಡ್‌ನ ಶ್ರೀ ಸಾಯಿ ಕಿಡ್ ಝೋನ್ ವಿದ್ಯಾಸಂಸ್ಥೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಹಾಗೂ ಶಾಲೆಯ ರಕ್ಷಕ ಶಿಕ್ಷಕ ಸಂಘದ ಸಹಯೋಗದೊಂದಿಗೆ ಆರ್ಟ್ ಅಂಡ್ ಕ್ರಾಫ್ಟ್ ಎಕ್ಸಿಬಿಷನ್ ಹಾಗೂ ಕಿಡಝೋನ್ ಫುಡ್ ಫೆಸ್ಟಿವಲ್ ಮಾ.07ರಂದು ನಡೆಯಿತು.

ಕಾರ್ಯಕ್ರಮವನ್ನು ರೋ ಲೋಕೇಶ್ ಸುವರ್ಣ (ಬಿ ಬಿ ಎಸ್  ಬಿಲ್ಡಿಂಗ್ ವಾಟರ್ಪ್ರೂಫ್ , ಮಂಗಳೂರು) ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ರೋ ಪ್ರಕಾಶ್ ಬಾಳಿಗ ಬಂಟ್ವಾಳ ಉಪಾಧ್ಯಕ್ಷರು ರೋಟರಿ ಕ್ಲಬ್ ಬಂಟ್ವಾಳ,  ಚೆನ್ನಕೇಶವ, ನಿವೃತ್ತ ಕಲಾ ಶಿಕ್ಷಕರು ಪೆರ್ಣೆ, ರೋ ಮೊಹಮ್ಮದ್ ಯಾಸೀರ್, ಕಾರ್ಯದರ್ಶಿ ರೋಟರಿ ಕ್ಲಬ್ ಬಂಟ್ವಾಳ ಹಾಗೂ ಕಲ್ಲಡ್ಕ ಮ್ಯೂಸಿಯಂ, ರೋ ಜಯಪ್ರಕಾಶ್ ಜೆ.ಎಸ್.

ಉದ್ಯಮಿ ಜಕ್ರಿಬೆಟ್ಟು, ತೇಜಸ್ವಿನಿ ಪೂಜಾರಿ, ಅಧ್ಯಕ್ಷರು ರಕ್ಷಕ ಶಿಕ್ಷಕ ಸಂಘ ಕಿಡ್ ಝೋನ್, ಹಾಗೂ ಆರತಿ ಅಮೀನ್ ಸದಸ್ಯೆ ಶಾಲಾ ಆಡಳಿತ ಮಂಡಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯ ಸಂಚಾಲಕರಾದ ಐತಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ  ಚೈತ್ರ ಧನ್ಯವಾದ ಅರ್ಪಿಸಿದರು. ಶಿಕ್ಷಕಿಯರಾದ ಪುಷ್ಪಲತಾ, ರಂಜಿನಿ, ಕುಮಾರಿ ಗೀತಾ, ದಿವ್ಯ ಸಹಕರಿಸಿದರು

Leave a Comment