ಬಂಟ್ವಾಳ :ಹಿರಿಯರ ತ್ಯಾಗ ಪರಿಶ್ರಮ ಸೇವೆಯಿಂದ ಇಂದು ಅಂಬಿಕಾ ಸೇವಾ ಸಂಘ ಸುವರ್ಣ ಸಂಭ್ರಮ ಆಚರಿಸುತಿದೆ, ಅಂಬಿಕಾ ಎಂದರೆ ಅಗ್ನಿ, ಈ ಸೇವಾ ಸಂಘವು ಸಮಾಜಕ್ಕೆ ಬೆಳಕಾಗಿ ಧರ್ಮ ಜಾಗೃತಿಯ ಕಾರ್ಯ ಮಾಡುತ್ತಿದೆ,ಇಲ್ಲಿನ ಯುವಕ ತಂಡ ಇನ್ನಷ್ಟು ಗಟ್ಟಿಯಾಗಿ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡಿ ಮುಂದೆ ಶತಮಾನದ ಸಂಭ್ರಮ ಆಚರಿಸಲಿ, ವ್ಯಕ್ತಿಗೆ ಸಂಸ್ಕಾರ ದೊರೆತರೆ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಅಮ್ಮುಂಜೆ ಗ್ರಾಮದ ಅಂಬಿಕಾ ಸೇವಾ ಸಂಘ (ರಿ)ಕಲಾಯಿ ಇದರ 50ನೇ ವರುಷದ ಸುವರ್ಣ ಮಹೋತ್ಸವದ ಸಂಭ್ರಮದ ಸಮಾರಂಭದಲ್ಲಿ ಆಶೀರ್ವಾಚನ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಸಂಘ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿರಬೇಕು, ಎಲ್ಲ ಜಾತಿ, ಮತ, ಧರ್ಮ ಭಾಷೆಯವರು ದ್ವೇಷ ಮರೆತು ಸಹಬಾಳ್ವೆಯ ಜೀವನ ಮಾಡಬೇಕು, ಸಮಾಜದಲ್ಲಿ ಶಾಂತಿ ನೆಲೆಸಿದರೆ ಎಲ್ಲರಿಗೂ ಸುಖ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ವಿನಾಯಕ ಭಜನಾ ಮಂಡಳಿ, ಅಮ್ಮುಂಜೆ ಅಂಬಿಕಾ ಅನ್ನಪೂರ್ಣೇಶ್ವರಿ ಸಂಘ, ಬಾರಿಂಜೆ,ವಿದ್ಯಾಯುವಕ ಮಂಡಲ, ಅಬ್ಬೆಟ್ಟು, ಉದಯ ಯುವಕ ಮಂಡಲ ಅಬ್ಬೆಟ್ಟು,ಶ್ರೀ ಕೃಷ್ಣ ಸೇವಾ ಸಮಿತಿ, ಬೆಂಜನಪದವು,ಶ್ರೀ ರಾಮಕೃಷ್ಣ ಭಜನಾ ಮಂಡಳಿ ಮಲ್ಲೂರು ಈ ಸೇವಾ ಸಂಸ್ಥೆಗಳನ್ನು ಗೌರವಿಸಿ ಪುರಸ್ಕರಿಸಲಾಯಿತು.
ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ಯಕ್ಷಗಾನ ಮೇಳದ ಕಲಾವಿದರಾದ ಸತೀಶ್ ನಿರ್ಚಾಲು , ರಾಜರಾಮ ಬಂದಾರು, ಶ್ರೀಧರ ಮಲ್ಲೂರು, ವೆಂಕಪ್ಪ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ
ಕರಿಯಂಗಳ ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಅಮುಂಜೆ ಶ್ರೀ ವಿನಾಯಕ ಜನಾರ್ದನ ದೇವಸ್ಥಾನದ ಆಡಳಿತ ಮುಕ್ತೇಸರ ನಾಗೇಶ್ ರಾವ್, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು, ಮಂಗಳೂರು ಮಹಿಮಾ ಎಂಟರ್ಪ್ರೈಸಸ್ ನ ರಾಜೇಶ್ ಆಚಾರ್ಯ ಎ,ಚಾರ್ಟೆಡ್ ಅಕೌಂಟೆಂಟ್ ಬಿ ಸುದೇಶ್ ರೈ , ಹೋಟೆಲ್ ಉದ್ಯಮಿ ಓಂದಾಸ್ ಶೆಟ್ಟಿ ಮುಂಬೈ, ಸುಂಕದಕಟ್ಟೆ ಯಕ್ಷಗಾನ ಮೇಳದ ಸಂಚಾಲಕ ದ್ರುವ ಎನ್ ಪೂಜಾರಿ, ಸುಂಕದಕಟ್ಟೆ ಯಕ್ಷಗಾನ ಮೇಳದ ಪ್ರಭಂದಕ ರಮೇಶ್ ಕುಲಶೇಖರ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಈಶ್ವರ ಪೂಜಾರಿ ಉಪಸ್ಥಿತರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಕಾರ್ಯಕ್ರಮಕ್ಕೆ ಬೇಟಿನೀಡಿ ಶುಭ ಹಾರೈಸಿದರು.
ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಚಂದ್ರಶೇಖರ ಭಂಡಾರಿ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಗಣೇಶ್ ಕೆ ಪ್ರಸ್ತಾವಿಕವಾಗಿ ಮಾತನಾಡಿದರು, ಶರತ್ ಹೊಸನಗರ ಧನ್ಯವಾದವಿತ್ತು, ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.
ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆದ ಸುವರ್ಣ ಸಂಭ್ರಮದಲ್ಲಿ ವೈದಿಕ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸುಂಕದಕಟ್ಟೆ ಮೇಳದ ಯಕ್ಷಗಾನ ಬಯಲಾಟ ನಡೆಯಿತು.













