ಕೊಟ್ಟಿಂಜ: ಮಾ13, ಶ್ರೀ ರಾಮ ಮಂದಿರದ 19ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಸಮಾರಂಭ. ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮ.

Coastal Bulletin
ಕೊಟ್ಟಿಂಜ: ಮಾ13, ಶ್ರೀ ರಾಮ ಮಂದಿರದ 19ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಸಮಾರಂಭ. ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ, ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮ.

ಬಂಟ್ವಾಳ :ತಾಲೂಕಿನ ಕೊಡ್ಮಾಣ್ ಗ್ರಾಮದ ಕೊಟ್ಟಿಂಜ ಶ್ರೀ ರಾಮ ಮಂದಿರದ 19ನೇ ಪ್ರತಿಷ್ಠಾ ವರ್ಧಂತ್ಯುತ್ಸವವು ವೇದಮೂರ್ತಿ ಪೊಳಲಿ ಸುಬ್ರಮಣ್ಯ ತಂತ್ರಿಯವರ ನೇತೃತ್ವದಲ್ಲಿ ಮಾ.13ರಂದು ಗುರುವಾರ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಕಾರ್ಯಕ್ರಮಗಳ ವಿವರ :

ಮಾ.13ರಂದು ಗುರುವಾರ ಬೆಳಿಗ್ಗೆ 8.00ರಿಂದ : ವೈಧಿಕ ಕಾರ್ಯಕ್ರಮಗಳು - ಪ್ರಾರ್ಥನೆ, ಪುಣ್ಯಾಹ, ಗಣಪತಿ ಹೋಮ,ಬೆಳಿಗ್ಗೆ 9.00ರಿಂದ : ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ,ಮಧ್ಯಾಹ್ನ 12.00ಕ್ಕೆ : ಮಹಾ ಮಂಗಳಾರತಿ ನಡೆದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು,ಶ್ರೀ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಶ್ರೀ ರಾಮಕೃಷ್ಣ ತಪೋವನ ಸೊಳಲಿ ಇವರು ಆಶೀರ್ವಚನ ನೀಡಲಿದ್ದಾರೆ.ಅಥಿತಿಗಳಾಗಿ ಕಿಶೋರ್ ಕುಮಾರ್, ಹಿಂದೂ ಜಾಗರಣ ವೇದಿಕೆ, ಪ್ರಾಂತ ಕಾರ್ಯಕಾರಿಣಿ ಸದಸ್ಯರು, ಜಗದೀಶ್‌ ಆಳ್ವ, ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ, ಮಂಗಳೂರು ಕ್ಷೇತ್ರ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಕೆ. ರವೀಂದ್ರ ಕಂಬಳಿ, ಸುಜೀರುಬೀಡು, ರಾಜ್ಯ 'ಸಹಕಾರ ರತ್ನ' ಪ್ರಶಸ್ತಿ ಪುರಸ್ಕೃತರು ಇವರಿಗೆ ಗೌರವ ಸನ್ಮಾನ ಹಾಗೂ ಕೀರ್ತಿಶೇಷ ಕೊಡಮಣ್ಣು ಕಾಂತಪ್ಪ ಶೆಟ್ಟಿ ಸ್ಮರಣಾರ್ಥ ಕೊಡ್ಮಾಣ್ ಶಾಲೆಯಲ್ಲಿ 2023-24ರ ಶಾಲಿನ ಎಸ್.ಎಸ್.ಎಲ್.ಸಿ. ಶೈಕ್ಷಣಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು.

ಮಧ್ಯಾಹ್ನ 1.15ರಿಂದ

ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ,ಸಂಜೆ 4 ರಿಂದ 6 : ಭಜನಾ ಸಂಕೀರ್ತನೆ ಶಾಸ್ತಾವು ಶ್ರೀ ಭೂತನಾಥೇಶ್ವರ ಭಜನಾ ಮಂಡಳಿ, ಕಾಂಜಿಲಕೋಡಿ, ಪೈಕ ಹಾಗೂ ಶ್ರೀ ಕಾಲ ಭೈರವ ಮಂಜುನಾಥೇಶ್ವರ ಭಜನಾ ಮಂಡಳಿ, ಮಳಲಿ, ಮಟ್ಟಿ ಇವರಿಂದ ನಡೆಯಲಿದೆ.

ಸಂಜೆ 7.00 ರಿಂದ ಮಹಾ ಮಂಗಳಾರತಿ, ಬಳಿಕ ಕೊಟ್ಟಿಂಜ ಶ್ರೀರಾಮ ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ,ಬಳಿಕ ಪ್ರತಿಷ್ಠಾ ವರ್ಧಂತ್ಯುತ್ಸವದ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು,ಕೆ. ಆರ್. ದೇವದಾಸ್ (ಮುಖ್ಯಸ್ಥರು, ಶ್ರೀ ರಾಮ ವಿದ್ಯಾಸಂಸ್ಥೆ, ಆರ್ಕುಳ) ಸತೀಶ್ ನಾಯ್ಗ ,ಕೊಡ್ಯಾಣ್ ಕೋಡಿ (ಅಧ್ಯಕ್ಷರು, ಮೇರಮಜಲು ಗ್ರಾಮ ಪಂಚಾಯತ್)ಇವರು ಉಪಸ್ಥಿತರಿರುವರು.

ರಾತ್ರಿ 8.30ಯಿಂದ ಚೌಕಿ ಪೂಜೆ, ನಂತರ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ " ಎಡ್ಮೂರ ಮುಗೇರ ಸತ್ಯಲು" ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment