Coastal Bulletin

ಫರಂಗಿಪೇಟೆ : ಸಂಘಟಿತ ಸಮಾಜ ಯಶಸ್ವಿಯಾಗಿ ಮುನ್ನಡೆಯಲಿದೆ. ಬಂಟ ಸಮಾಜ ಅಲ್ಪಸಂಖ್ಯಾತ ರಾಗುವುದಕ್ಕೆ ಮುನ್ನ ಎಚ್ಛೆತ್ತು ಕೊಳ್ಳುವ ಅಗತ್ಯವಿದೆ ಎಂದು ಬಂಟವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು.

ಫರಂಗಿಪೇಟೆ ವಲಯ ಬಂಟರ ಸಂಘದ ವತಿಯಿಂದ ಬಂಟವಾಳ ಬಂಟರ ಭವನ ದಲ್ಲಿ ನಡೆದ ಪದಗ್ರಹಣ ಮತ್ತು ಆಟಿದ ಗಮ್ಮತ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಆವರು ಮಾತನಾಡಿದರು.

ಪತ್ರಕರ್ತೆ ನಮ್ಮ ಕುಡ್ಲ ನ್ಯೂಸ್ ಚಾನೆಲ್ ನ ವಾರ್ತಾವಾಚಕಿ ಡಾ ಪ್ರಿಯ ಹರೀಶ್ ಶೆಟ್ಟಿ ಯವರು ಆಟಿದ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿ ಗಳಾಗಿ ಮಹೇಶ್ ಮೋಟಾರ್ಸ್ ಮಾಲಕರಾದ ಎ ಕೆ ಜಯರಾಮ್ ಶೇಕ ,ಬಂಟವಾಳ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ್ ಚೌಟ ,ಬಂಟವಾಳ ತಾಲೂಕು ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷ ನಿಶಾನ್ ಆಳ್ವ ,ಫರಂಗಿಪೇಟೆ ವಲಯ ಬಂಟರ ಸಂಘದ ಗೌರವಾಧ್ಯಕ್ಷರಾದ ವಿಠ್ಠಲ್ ಶೆಟ್ಟಿ ನೀರೊಲ್ಬೆ ನಿಕಟ ಪೂರ್ವ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಕೊಳಂಬೆ , ನಿಕಟ ಪೂರ್ವ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ನೂತನ ಸಮಿತಿಯ ಗೌರಾವಾಧ್ಯಕ್ಷರಾದ ಸುಂದರ ಶೆಟ್ಟಿ ಕಲ್ಲ ತಡಮೆ , ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಕೊಡ್ಮಾಣ್ , ಉಪಾಧ್ಯಕ್ಷ

ವಿಶ್ವನಾಥ್ ಶೆಟ್ಟಿ ಕೊಟ್ಟಿಂಜ ಗುತ್ತು , ಕಾರ್ಯದರ್ಶಿ ಎ ಕೆ ಗಿರೀಶ್ ಶೆಟ್ಟಿ , ಕೋಶಾಧಿಕಾರಿ ಪ್ರತಾಪ್ ಆಳ್ವ ಸುಜೀರುಗುತ್ತು , ಮಹಿಳಾ ವಿಭಾಗದ ಅಧ್ಯಕ್ಷೆ ಜಯಶ್ರೀ ಉದಯಕುಮಾರ್ ಶೆಟ್ಟಿ , ಕಾರ್ಯದರ್ಶಿ ದೇವಿಕಾ ರಾಜೀವ್ ಪೂಂಜಾ , ಯುವ ವಿಭಾಗದ ಅಧ್ಯಕರಾದ ಎ ಕೆ ಪ್ರಶಾಂತ್ ಶೆಟ್ಟಿ , ಕಾರ್ಯದರ್ಶಿ ಕೆ ಪ್ರಣಯ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ದ್ವಿತೀಯ ಪಿ ಯು ಸಿ ಮತ್ತು ಎಸ್ ಎಲ್ ಎಲ್ ಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು , ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸನ್ಮಾನಿಸಲಾಯಿತು ಹಾಗು ವೈವಾಹಿಕ ಜೀವನದಲ್ಲಿ ೫೦ ಸಂವತ್ಸರಗಳನ್ನು ಕಳೆದ ದಂಪತಿಗಳನ್ನು ಸನ್ಮಾನಿಸಲಾಯಿತು.

 ಉಪಾಧ್ಯಕ್ಷ ವಿಶ್ವನಾಥ್ ಶೆಟ್ಟಿ ಕೊಟ್ಟಿಂಜ ಗುತ್ತು ಸ್ವಾಗತಿಸಿದರು , ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ ಪ್ರಸ್ತಾಪಿಸಿದರು , ಕಾರ್ಯದರ್ಶಿ ಎ ಕೆ ಗಿರೀಶ್ ಶೆಟ್ಟಿ ವಂದಿಸಿದರು ಭುವನೇಶ್ವರಿ ಶೆಟ್ಟಿ ಮತ್ತು ನಾಗರತ್ನ ರೈ ನಿರೂಪಿಸಿದರು.

Leave a Comment