Coastal Bulletin

ಬಂಟ್ವಾಳ: ರಾಜ್ಯ ವಿವಿಧ ಕಾಲೇಜುಗಳಲ್ಲಿ ಕಂಡು ಬಂದಿದ್ದ ಹಿಜಾಬ್ ಮತ್ತು ಕೇಸರಿ ಶಾಲು ಧಾರಣೆ ವಿವಾದ ಇದೀಗ ಗ್ರಾಮೀಣ ಪ್ರದೇಶದ ಕಾಲೇಜಿನಲ್ಲಿಯೂ ಕಂಡು ಬಂದಿದೆ.

ಇಲ್ಲಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 8 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರ ಪೈಕಿ ಮಂಗಳವಾರ 6 ಮಂದಿ ಮಾತ್ರ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಬಂದಿದ್ದಾರೆ. ಇದನ್ನು ಖಂಡಿಸಿ ಹಲವಾರು ಮಂದಿ ಹಿಂದೂ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಬಂದು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದಾರೆ.

ಇದೇ

ವೇಳೆ ಕಾಲೇಜು ಆವರಣದಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಗಿತ್ತು. ಪ್ರಾಂಶುಪಾಲ ಪ್ರೊ.ಕೆ.ಹರಿಪ್ರಸಾದ್ ಶೆಟ್ಟಿ ಅವರು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಬಂದು ವಿದ್ಯಾರ್ಥಿನಿಯರ ಪೋಷಕರನ್ನು ಕರೆಸಿ ಮಾತುಕತೆ ನಡೆಸಿದ ಬಳಿಕ ಕಾಲೇಜಿಗೆ ರಜೆ ಘೋಷಿಸಿದರು. ಪುಂಜಾಲಕಟ್ಟೆ ಪೊಲೀಸ್ ಠಾಣೆ ಎಸೈ ಸುಕೇಶ್ ಮತ್ತಿತರರು ಬಂದೋಬಸ್ತು ಏರ್ಪಡಿಸಿದ್ದರು.   

Leave a Comment