Coastal Bulletin

ಬಂಟ್ವಾಳ :ಇಲ್ಲಿನಕ್ಯಾಂಪ್ಕೋ ದ ಮಂಚಿ ಶಾಖೆಯಲ್ಲಿ ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೊದ ಸಕ್ರಿಯ ಸದಸ್ಯರಾದ ಶ್ರೀ ನಾರಾಯಣ ಶೆಟ್ಟಿಯವರ ಮಗ ಪ್ರಶಾಂತ್ ಶೆಟ್ಟಿ ಅಪಘಾತದಲ್ಲಿ ಆಕಸ್ಮಿಕ ಮರಣ ಹೊಂದಿದ ಕಾರಣ ಕ್ಯಾಂಪ್ಕೋ ಸಂಸ್ಥೆಯ ಮಾಜಿ ಅಧ್ಯಕ್ಷರೂ ಹಾಲಿ ನಿರ್ದೇಶಕರೂ ಆಗಿರುವ ಶ್ರೀ ಎಸ್.ಆರ್ ಸತೀಶ್ಚಂದ್ರರವರು ಶ್ರೀ ನಾರಾಯಣ ಶೆಟ್ಟಿಯವರಿಗೆ ₹.50000/- ಸಹಾಯಧನದ ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರಾದ ಶ್ರೀ ರಮೇಶ್ ರಾವ್ ಪತ್ತುಮುಡಿ, ಶ್ರೀ ಸುರೇಶ್ ರಾವ್, ಕ್ಯಾಂಪ್ಕೋ ಮುಖ್ಯ ಮಾರುಕಟ್ಟೆ ಅಧಿಕಾರಿ ಶ್ರೀ ಗೋವಿಂದ

ಭಟ್, ಶಾಖಾಧಿಕಾರಿ ಶ್ರೀ ಶಿವಾನಂದ ಕಣ್ವತೀರ್ಥ, ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನಾರಾಯಣ ಪಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Comment