Coastal Bulletin

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳ ಆರಂಭದಲ್ಲಿ ದೇವಸ್ಥಾನಕ್ಕೆ ಭೇಟಿನೀಡಿದ್ದ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬೇಡಿಕೆಯನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ತುರ್ತಾಗಿ ಸ್ಪಂದಿಸಿದ ಶಾಸಕರು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಳ್ಳಿಗೆ ಗ್ರಾಮದಲ್ಲಿ ಕಳೆದ ಎರಡು ತಿಂಗಳಲ್ಲಿ ವಿವಿಧ ಕಾಮಗಾರಿಗಳನ್ನು ನೆರವೇರಿಸಲು ಅನುದಾನವನ್ನು ಒದಗಿಸಿದ್ದರು. ಇದೀಗ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದು, ಫೆಬ್ರವರಿ 13ರಂದು ಭಾನುವಾರ ಶಾಸಕರು ಎಲ್ಲಾ ಕಾಮಗಾರಿಗಳ ಲೋಕಾರ್ಪಣೆ ನೆರವೇರಿಸಲಿದ್ದಾರೆ.

ಬ್ರಹ್ಮರಕೂಟ್ಲು-ದರಿಬಾಗಿಲು ರಸ್ತೆ, ಮಾಡಂಗೆ- ಕನಪಾಡಿ ರಸ್ತೆ, ಕನಪಾಡಿ-ದೇವಂದಬೆಟ್ಟು ರಸ್ತೆ, ದೇವಂದಬೆಟ್ಟು ದೇವಸ್ಥಾನದ ಹಿಂಬದಿ ರಸ್ತೆ, ಮಾಡಂಗೆ-ಪಲ್ಲಮಜಲು ರಸ್ತೆ, ದೇವಂದಬೆಟ್ಟು ಮತ್ತು ಬೆದ್ರಾಡಿಯಲ್ಲಿ 2 ಕೊಳವೆಬಾವಿ, ತಡೆಗೋಡೆ, ಪಂಚಾಯತ್ ಅನುದಾನದಲ್ಲಿ ನಿರ್ಮಿಸಲಾದ ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಒಟ್ಟು ಒಂದು ಕೋಟಿ ರೂ. ಅನುದಾನವನ್ನು ಒದಗಿಸಿದ್ದು, ದೇವಸ್ಥಾನವನ್ನು ಸಂಪರ್ಕಿಸುವ ಹೆಚ್ಚಿನ ಎಲ್ಲಾ ರಸ್ತೆಗಳು ಹೊಸರೂಪವನ್ನು ಪಡೆದಿದೆ.

ಇಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಬಳಿ ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಜಾರಂದಗುಡ್ಡೆ ಬ್ರಹ್ಮರಕೂಟ್ಲು-ದರಿಬಾಗಿಲು ರಸ್ತೆ ಕಾಮಗಾರಿಗೆ

ಚಾಲನೆ ನೀಡಿದರು.

ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಪಂಚಾಯತ್ ಸದಸ್ಯರಾದ ಮನೋಜ್ ವಳವೂರು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಗ್ರಾಪಂ ಮಾಜಿ ಸದಸ್ಯೆ ರೇವತಿ ಮಾಡಂಗೆ, ದೇವಿಪ್ರಸಾದ್ ಎಂ, ಯೋಗೀಶ್ ದರಿಬಾಗಿಲು, ಪೂವಪ್ಪ ದರಿಬಾಗಿಲು, ಸತೀಶ್ ಬ್ರಹ್ಮರಕೂಟ್ಲು, ಪ್ರವೀಣ್ ಜ್ಯೋತಿಗುಡ್ಡೆ, ಕೇಶವ ಪಲ್ಲಮಜಲು, ಮಾಧವ ಬ್ರಹ್ಮರಕೂಟ್ಲು, ಜಯಪ್ರಕಾಶ್ ಚಂದ್ರಿಗೆ, ಪ್ರವೀಣ್ ಮಾಡಂಗೆ, ಕಿಶೋರ್ ಜಾರಂದಗುಡ್ಡೆ, ಶ್ರೀನಾಥ್ ಕನಪಾಡಿ, ಪ್ರಶಾಂತ್ ರಾಮಲ್ ಕಟ್ಟೆ, ಜಗದೀಶ್ ಕಂಜತ್ತೂರು, ಸಂದೀಪ್ ಬೀಡು, ವಿಶ್ವನಾಥ್ ದರಿಬಾಗಿಲು, ರಘುನಾಥ್ ಆಯೆರೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.

Leave a Comment