ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಹಿರಿಯ ಕವಿ ಹಾಗು ಸಾಹಿತಿ ವಿ.ಸುಬ್ರಮಣ್ಯ ಭಟ್ ಅವರಿಗೆ ಕರ್ನಾಟಕ ರಾಜ್ಯ ಬರಹಗಾರರ ಬಳಗದ ವತಿಯಿಂದ ರಾಜ್ಯ ಮಟ್ಟದ ಕಾವ್ಯ ಶ್ರೀ ಪ್ರಶಸ್ತಿ ಲಭಿಸಿದೆ.
ಕಳೆದ ಮೂವತ್ತೊಂದು ವರ್ಷಗಳಿಂದ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಕಾವ್ಯ ರಚನಾ ಶೈಲಿ ಹಾಗು ನಿರಂತರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ವಿ. ಸು.
ಭ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ಇವರು ಈಗಾಗಲೇ ನಿರತ ಸಾಹಿತ್ಯ ಸಂಪದ,ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಸಾಹಿತ್ಯ-ಸಾಂಸ್ಕೃತಿಕ,ಸಂಘಟನಾತ್ಮಕವಾಗಿಯೂ ಸಕ್ರಿಯರಾಗಿದ್ದಾರೆ.
ವಿವಿಧ ಪತ್ರಿಕೆ,ಜಾಲತಾಣ ಗಳಲ್ಲಿ ಸಾಹಿತ್ಯದ ನಾನಾ ಪ್ರಕಾರಗಳ ಬರೆಹಗಳು ಪ್ರಕಟವಾಗುತ್ತಿವೆ.ಚುಟುಕು ಬರಹಗಳಿಗೆ ಇವರು ಬಹಳ ಪ್ರಸಿದ್ದರಾಗಿದ್ದಾರೆ














