Coastal Bulletin

ಬಂಟ್ವಾಳ :ಅನುದಾನ ನೀಡುವುದು ನನ್ನ ಕರ್ತವ್ಯ ಎಂದು ಮಾಡಿದ್ದೇನೆ, ಅದರೆ ನನಗೆ ಕಳೆದ ಐದು ವರ್ಷಗಳಲ್ಲಿ ಸಂಘರ್ಷ ರಹಿತವಾದ ಶಾಂತಿಯುತ ಬಂಟ್ವಾಳ ನನ್ನ ಆದ್ಯತೆ ಯಾಗಿದ್ದು, ಅದು ನೆರವೇರಿದ್ದು ಸಂತಸ ತಂದಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ಸೋಮವಾರ ಅರಳ ಗ್ರಾಮ‌ ಪಂಚಾಯತ್ ವ್ಯಾಪ್ತಿಯಲ್ಲಿ 16.2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿ ಗಳ ಉದ್ಘಾಟಿಸಿ ಮತ್ತು ಅರಳ ಬಿಜೆಪಿ ಶಕ್ತಿ ಕೇಂದ್ರ ದ ಕಾರ್ಯಕರ್ತರ ಸಮಾವೇಶ ದಲ್ಲಿ ಮಾತನಾಡಿದರು. 

 ಬಿಜೆಪಿ ತತ್ವ ಸಿದ್ದಾಂತದ ಅಡಿಯಲ್ಲಿ ರಾಷ್ಟ್ರೀಯತೆಯ ಚಿಂತನೆಯೊಂದಿಗೆ, ಶಾಸಕನಾಗಿ ಕಾರ್ಯನಿರತವಹಿಸಿದ್ದೇನೆ.ಪಕ್ಷ ಅಧಿಕಾರಕ್ಕೆ ಬರುವ ಮೊದಲು ನೀಡಿದ ಎಲ್ಲಾ ಭರವಸೆಗಳನ್ನು ಜನತೆಗೆ ನೀಡಿ ಮಾತು ಉಳಿಸಿದೆ ಎಂದು ಅವರು ತಿಳಿಸಿದರು.

ಆರ್ಥಿಕತೆಯಲ್ಲಿ ಜಗತ್ತಿನಲ್ಲಿಯೇ ಭಾರತ ದೇಶವನ್ನು ಬಲಿಷ್ಠವಾಗಿಸಿ, ಎತ್ತರಕ್ಕೆ ಸ್ಥಾನಕ್ಕೆ ಕೊಂಡೊಯ್ಯದ ಕೀರ್ತಿ ಪ್ರಧಾನಿಗೆ ಸಲ್ಲುತ್ತದೆ.

  ಕೊರೊನಾ ಸಹಿತ ಅನೇಕ ಸಮಸ್ಯೆಗಳನ್ನು ಮೀರಿ ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಯಲು ಪ್ರಧಾನಿ ನರೇಂದ್ರ ಮೋದಿಯವರ

ಸಮರ್ಥ ನಾಯಕತ್ವದ ಮೂಲಕ ಸಾಧ್ಯವಾಯಿತು ಎಂದು ಅವರು ಹೇಳಿದರು.ಅವರ ಅವಧಿಯಲ್ಲಿ ಶಾಸಕನಾಗಿರುವುದು ನನಗೆ ಅತೀವ ಸಂತಸ ತಂದಿದೆ.

ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಲಕ್ಷ್ಮೀ ಧರ ಶೆಟ್ಟಿ, ಸದಸ್ಯರಾದ ತುಂಗಮ್ಮ, ಧನ್ಯಾ ಚಂದ್ರಹಾಸ ಪೂಜಾರಿ, ಪ್ರಸನ್ನ ಶೆಟ್ಟಿ, ಪ್ರಮುಖರಾದ ಜಗದೀಶ ಆಳ್ವ ಅಗ್ಗೊಂಡೆ, ರಂಜನ್ ಕುಮಾರ್ ಶೆಟ್ಟಿ, ಡೊಂಬಯ್ಯ ಅರಳ, ಉಮೇಶ್ ಡಿ.ಅರಳ, ಚಂದ್ರಶೇಖರ ಶೆಟ್ಟಿ ಪಂಬದಗದ್ದೆ, ಅಶ್ರಫ್ ಕುಟ್ಟಿಕಳ, ಹಿಲೇರಿ ಕುಟ್ಟಿಕಳ,ಮಹಿಳಾ ಮೋರ್ಚಾದ ಅಧ್ಯಕ್ಷೆ ರೂಪಾ ಶೆಟ್ಟಿ , ಶಶಿಧರ್ ರೈ, ಶಾರಿಕಾ, ಅನುಸೂಯ,ಪದ್ಮನಾಭ ಸಾಲಿಯಾನ್ , ಮನೋಹರ್ ಶೆಟ್ಟಿ, ರವಿ ಅರಸ್ ಮತ್ತಿತರರು ಉಪಸ್ಥಿತರಿದ್ದರು.

ಗ್ರಾ.ಪಂ.ಲಕ್ಮೀಧರ ಶೆಟ್ಟಿ ಸ್ವಾಗತಿಸಿದರು.ಬಂಟ್ವಾಳ ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿದರು

Leave a Comment