Coastal Bulletin

ಬಂಟ್ವಾಳ :ಆಶೀರ್ವಾದ್ ಸೇವಾ ಸಂಘ ಮತ್ತು ಆಶೀರ್ವಾದ್ ಮಹಿಳಾ ಸೇವಾ ಸಂಘ ತುಂಬೆ ಇದರ 35ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಸಂಘದ ಸದಸ್ಯರು, ಸದಸ್ಯೆಯರು ಸೇರಿದಂತೆ ಊರಿನ ಜನತೆಗೆ ಕ್ರೀಡಾಕೂಟ ಏರ್ಪಡಿಸಲಾಗಿತ್ತು.

ಬೆಳಿಗ್ಗೆ 8.30ಕ್ಕೆ ಕ್ರೀಡಾಕೂಟ ಉದ್ಘಾಟನೆಗೊಂಡು, ಸಂಜೆ ವೇಳೆಗೆ ಬಹುಮಾನ ವಿತರಣೆ ಮಾಡಲಾಯಿತು. ಕಬ್ಬಡಿ, ಹಗ್ಗಜಗ್ಗಾಟ, ಲಗೋರಿ, ರಿಲೇ, ಶಾಟ್ ಪುಟ್, ಗೋಣಿ ಚೀಲ ಓಟ ಸೇರಿದಂತೆ 40ಕ್ಕೂ ಅಧಿಕ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಂದಂತಹ ಎಲ್ಲರಿಗೂ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಊಟ, ಸಂಜೆ ಚಾಹಾ ತಿಂಡಿ

ವ್ಯವಸ್ಥೆಯನ್ನು ಸಂಘದ ವತಿಯಿಂದ ಮಾಡಲಾಗಿತ್ತು. ಬೆಳಿಗ್ಗಿನಿಂದ ಸಂಜೆಯ ವರೆಗೆ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಸಂಘದ ಸದಸ್ಯರುಗಳ ಜೊತೆಗೆ ಮಕ್ಕಳು, ಮಾತೆಯರು, ಹಿರಿಯರು ಖುಷಿಯಿಂದ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರುಗಳು, ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ಗೌರವ ಸಲಹೆಗಾರರು, ಕ್ರೀಡಾ ಕಾರ್ಯದರ್ಶಿಗಳು ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು

Leave a Comment