ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ)ಆಶ್ರಯದಲ್ಲಿ ನಿರ್ಮಾಣಗೊಂಡಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಪ್ರಥಮ ವರ್ಧಂತಿ ಮಹೋತ್ಸವವು ವೇದಮೂರ್ತಿ ಸತ್ಯೇಶ ಭಟ್ ಇವರ ಪೌರೋಹಿತ್ಯದಲ್ಲಿ ವೈದಿಕ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜ.07ರಂದು ಬುಧವಾರ ವಿಜೃಂಭಣೆಯಿಂದ ನಡೆಯಿತು.
ಮದ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇಲ್ಲಿನ ಮನೋವಿಭಾಗ ತಜ್ಞ ಶ್ರೀಪತಿ ಭಟ್ ಶಿಮಂತೂರು ಮಾತನಾಡಿ, ಹಿಂದೂ ಸಮಾಜದ ಉನ್ನತಿಗೆ ಗಟ್ಟಿ ಧ್ವನಿ ಹಾಗೂ ಸಂಘಟನಾ ಶಕ್ತಿಯ ಅಗತ್ಯವಿದೆ, ಹಿಂದೆ ಪರಕೀಯರು ನಮ್ಮನ್ನು ದಾಳಿ ಮಾಡಿದರೆ ಪ್ರಸ್ತುತ ಕಾಲಮಾನದಲ್ಲಿ ನಮ್ಮ ಆಂತರಿಕ ದೌರ್ಬಲ್ಯಗಳು ನಮಗೆ ಹಿನ್ನಡೆಯಾಗಿದೆ, ನಾವೆಲ್ಲ ಒಂದೇ ಎನ್ನುವ ಮನೋಭಾವನೆಯಿಂದ ಪರಸ್ಪರ ಪ್ರೀತಿ, ವಿಶ್ವಾಸ, ಸಾಮರಸ್ಯದಿಂದ ಹಿಂದೂ ಸಮಾಜವನ್ನು ಒಟ್ಟುಗೂಡಿಸಿ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವ ದ್ಯೇಯದೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ತಾ ಪಂ ಮಾಜಿ ಉಪಾಧ್ಯಕ್ಷ ಪುರುಷ ಸಾಲ್ಯಾನ್ ನೆತ್ತರಕೆರೆ ಮಾತನಾಡಿ, ಬಹಳ ಹಿಂದೆ ಪವಿತ್ರ ಗೋಮಾಳವಾಗಿದ್ದ ಈ ಪ್ರದೇಶವು ಇಂದು ಅಭಿವೃದ್ಧಿ ಹೊಂದಿದ ಜನನಿಬಿಡ ಸ್ಥಳವಾಗಿದ್ದು, ಜನರ ದುಃಖ ದುಮ್ಮಾನಗಳನ್ನು ದೇವರಲ್ಲಿ ನೀವೇದಿಸಿಕೊಳ್ಳಲು ಮಂದಿರ ನಿರ್ಮಾಣವಾಗಿದೆ, ಯುವ ಜನತೆ ಯಾವುದೇ ಕೆಟ್ಟ ಚಟ, ವ್ಯಸನಗಳಿಗೆ ಬಲಿಯಾಗದೆ ಜೀವನದುದ್ದಕ್ಕೂ ಉತ್ತಮ ಅರೋಗ್ಯದಾಯಕ ಬದುಕನ್ನು ಕಟ್ಟಿಕೊಂಡರೆ ಯಾವುದೇ ಸವಾಲು ಸಮಸ್ಯೆಗಳನ್ನು ಎದುರಿಸಲು ಸಾಧ್ಯ ಎಂದು ಹೇಳಿದರು.
ಈ
ಸಂದರ್ಭದಲ್ಲಿ ಬೆಂಜನಪದವು ಭದ್ರಾಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್, ಉದ್ಯಮಿ ಉಮೇಶ್ ಬರ್ಕೆ, ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಆನಂದ ಪೂಜಾರಿ ಮೂವ ದೊಡ್ಡ ಮನೆ, ವೆಂಕಪ್ಪ ಪೂಜಾರಿ ಮೂವ ದೊಡ್ಡ ಮನೆ, ಜಿಲ್ಲಾ ಟ್ಯಾಕ್ಸಿ ಚಾಲಕರ ಸಂಘದ ಉಪಾಧ್ಯಕ್ಷ ಹರೀಶ್ ಕುತ್ತಾರ್, ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ ನಾಯ್ಗ ಕೊಡ್ಮಾಣ್, ಮೇರಮಜಲು ಗ್ರಾ ಪಂ ನಿಕಟ ಪೂರ್ವ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಕೊಟಿಂಜ, ಸುಲೋಚನಾ ಕೆ ಶೆಟ್ಟಿ ಕೊಡ್ಮಾಣ್,ಸಂದೀಪ್ ಸಾಲ್ಯಾನ್ ಪಂಜಿಮೊಗರು, ಕೆ ಟಿ ಡಿ ಪಿ ಕ್ರೀಡಾ ಸಂಚಾಲಕ ಶರತ್ ಕುಮಾರ್, ಕಳ್ಳಿಗೆ ಗ್ರಾ ಪಂ ಸದಸ್ಯೆ ರೇಷ್ಮಾ ಸತೀಶ್, ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರವೀಣ್ ಬೆಂಜನಪದವು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಇಲ್ಲಿನ ಮನೋವಿಭಾಗ ತಜ್ಞ ಶ್ರೀಪತಿ ಭಟ್ ಶಿಮಂತೂರು ಇವರನ್ನು ಸನ್ಮಾನಿಸಲಾಯಿತು.
ಕಿಶೋರ್ ಭಂಡಾರಿ ಬೆಳ್ಳೂರು ಸ್ವಾಗತಿಸಿ ಧನ್ಯವಾದವಿತ್ತರು, ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು, ಸುಬ್ರಮಣ್ಯ ಭಟ್ ಹಾಗೂ ದಿಲೀಪ್ ಪಕ್ಕೊಳಿಮಾರ್ ಸಹಕರಿಸಿದರು.











