ಬ್ರಹ್ಮರಕೂಟ್ಲು: 54ನೇ ವರ್ಷದ ಏಕಹಾ ಭಜನಾ ಮಹೋತ್ಸವ, ಧಾರ್ಮಿಕ ಸಭೆ ಅಧ್ಯಾತ್ಮ ನಮ್ಮ ಜೀವನಕ್ಕೆ ಬೆಳಕು: ಒಡಿಯೂರು ಶ್ರೀ

Coastal Bulletin
ಬ್ರಹ್ಮರಕೂಟ್ಲು: 54ನೇ ವರ್ಷದ ಏಕಹಾ ಭಜನಾ ಮಹೋತ್ಸವ, ಧಾರ್ಮಿಕ ಸಭೆ ಅಧ್ಯಾತ್ಮ ನಮ್ಮ ಜೀವನಕ್ಕೆ ಬೆಳಕು: ಒಡಿಯೂರು ಶ್ರೀ

ಬಂಟ್ವಾಳ :ಅಧ್ಯಾತ್ಮಿಕತೆಯೊಂದಿಗೆ ಬದುಕು ಸಾಗಿಸಿದರೆ ಸುಖ ದುಃಖವನ್ನು ಸರಿದೂಗಿಸಿ ಮುನ್ನಡೆಯಬಹುದು, ಅಧ್ಯಾತ್ಮ ನಮ್ಮ ಜೀವನಕ್ಕೆ ಬೆಳಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.) ಬ್ರಹ್ಮರಕೂಟ್ಲು ಇದರ 54ನೇ ವರ್ಷದ ಏಕಹಾ ಭಜನಾ ಮಹೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ, ರಾಮಾಯಣ ನಮ್ಮ ಬದುಕಿಗೆ ದಾರಿದೀಪ, ರಾಮನ ನಡೆ, ಕೃಷ್ಣನ ನುಡಿ ನಮಗೆ ಆದರ್ಶ, ರಾಮ ಎನ್ನುವಲ್ಲಿ ಪ್ರೇಮವಿದೆ,ಧಾರ್ಮಿಕ ಆಚರಣೆಗಳ ಮೂಲಕ ಜಾಗೃತ ಸಮಾಜ ನಿರ್ಮಾಣವಾಗಿ, ಮಾನವೀಯ ಮೌಲ್ಯದ ಬೀಜವನ್ನು ಬಿತ್ತೋಣ ಎಂದು ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಭಜನೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಸಾಧ್ಯ, ಈ ಮೂಲಕ ಶ್ರೀ ರಾಮ ಭಜನಾ ಮಂದಿರ ದೇವರ ಸೇವೆ ಮಾಡುತ್ತಿದೆ ಎಂದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಬಂಟ್ವಾಳ ಘಟಕ ಅಧ್ಯಕ್ಷ ದಿವಾಕರ ಶೆಟ್ಟಿ ಪರಾರಿಗುತ್ತು ಶುಭ ಹಾರೈಸಿದರು.ಉಪ್ಪಳ ಕ್ಷೇತ್ರದ ಶ್ರೀ ಕೃಷ್ಣ ಕರ್ನಾವರ್ ಅವರನ್ನು ಸನ್ಮಾನಿಸಲಾಯಿತು.

ಸಾಧಕರಾದ ಸುಧೀರ್ ಕುಮಾರ್ ಜಾರಂದಗುಡ್ಡೆ, ಚಂದ್ರಹಾಸ ಕಡೆಗೋಳಿ,

ಪ್ರಿಯದರ್ಶಿನಿ ದರಿಬಾಗಿಲು, ಕು| ರಿಧಿ ದರಿಬಾಗಿಲು, ದಕ್ಷಿಣ್ ಎಸ್ ಸಾಲ್ಯಾನ್ ಇವರನ್ನು ಗೌರವಿಸಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ ದಿನಕರ ಬಿ. ಬಂಜನ್ ಬರೆ ಬೀಡು ಉತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮಾಡಂಗೆ, ಮೂಕಾಂಬಿಕಾ ಮಾತೃ ಮಂಡಳಿ ಅಧ್ಯಕ್ಷೆ ಪ್ರಿಯದರ್ಶಿನಿ ದರಿಬಾಗಿಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಂದಿರಕ್ಕೆ ಭೇಟಿ ನೀಡಿದರು.

ಭಜನಾ ಮಂದಿರದ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಲು ಪ್ರಾಸ್ತವಿಕವಾಗಿ ಮಾತನಾಡಿದರು,ಕಾರ್ಯದರ್ಶಿ ಮದ್ವಿನ್ ಪಿರಿಯೋಡಿಬೀಡು ಸ್ವಾಗತಿಸಿ, ಉದಯ ಕುಮಾರ್ ಜ್ಯೋತಿಗುಡ್ಡೆ ಹಾಗೂ ನವೀನ ಬಂಗೇರ ಪಲ್ಲ ಸನ್ಮಾನ ಪತ್ರ ವಾಚಿಸಿದರು,ಸಂತೋಷ್ ದರಿಬಾಗಿಲು ಧನ್ಯವಾದವಿತ್ತು, ಜಗದೀಶ ಕಡೆಗೋಳಿ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಮೊದಲು ತರಿಕಿಟ ಕಲಾ ಕಮ್ಮಟ ಜ್ಯೋತಿಗುಡ್ಡೆ ಇವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಬಳಿಕ ಸಾಯಿ ಶಕ್ತಿ ಕಲಾ ಬಳಗ ಮಂಗಳೂರು ಇವರಿಂದ "ಜೋಡು ಜೀಟಿಗೆ" ನಾಟಕ ಪ್ರದರ್ಶನಗೊಂಡಿತು

Leave a Comment