Coastal Bulletin

ಬಂಟ್ವಾಳ :ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಸೋಮವಾರ ಶ್ರೀ ರಕ್ತೇಶ್ವರಿ ದೇವಸ್ಥಾನ ಬಿಸಿ ರೋಡಿನಲ್ಲಿ ಅಯೋಧ್ಯ ಶ್ರೀ ರಾಮ ಜನ್ಮಭೂಮಿಯ ಮುಕ್ತಿ ಆಂದೋಲನದ ಪ್ರಯುಕ್ತವಾಗಿ ಗಣಹೋಮ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಧಾಮ ಮಾಣಿಲ ಇವರು ಆಶೀರ್ವಚನ ನೀಡಿದರು. ಧಾರ್ಮಿಕ ಚಿಂತಕರು, ಲೇಖಕರು, ಅಯೋಧ್ಯ ಶ್ರೀ ರಾಮ ಜನ್ಮಭೂಮಿಯ ಕರಸೇವಕರಾದ ಡಾಕ್ಟರ್ ಪಿ.ಅನಂತಕೃಷ್ಣ ಭಟ್ ಇವರು ಧಾರ್ಮಿಕ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ ಪ್ರಧಾನ ಕಾರ್ಯದರ್ಶಿ ಕೆ.ಟಿ.ಉಲ್ಲಾಸ್, ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಜಗದೀಶ್ ನೆತ್ರಕೆರೆ

ಹಾಗೂ ಬಂಟ್ವಾಳ ತಾಲೂಕು ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರಾದ ತಿರುಲೇಶ್ ಬೆಳ್ಳೂರು ಉಪಸ್ಥಿತರಿದ್ದರು.

ಪ್ರಾಂತ ಪ್ರದಾನ ಕಾರ್ಯದರ್ಶಿ ಕೆ. ಟಿ. ಉಲ್ಲಾಸ್ ಮೂಲಕ ಹಿಂದು ಸುರಕ್ಷಾ ನಿಧಿ ತಾಲ್ಲೂಕು ಪದಾಧಿಕಾರಿಗಳು ಹಸ್ತಾಂತರಿಸಿದರು. ನಂತರ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮವನ್ನು ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಮೇಶ ವಗ್ಗ ಸ್ವಾಗತಿಸಿದರು, ಮನೋಜ್ ಪೆರ್ನೆ ವಂದಿಸಿ ಸುರೇಶ್ ನಾವುರ ಕಾರ್ಯಕ್ರಮ ನಿರೂಪಿಸಿದರು.

Leave a Comment