ತುಂಬೆ: ಸುರಭಿ ಸ್ಟೀಲ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ.

Coastal Bulletin
ತುಂಬೆ: ಸುರಭಿ ಸ್ಟೀಲ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಆಯುಧ ಪೂಜಾ ಕಾರ್ಯಕ್ರಮ.

ಬಂಟ್ವಾಳ :ತಾಲೂಕಿನ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಇರುವ ನವೀನ್ ಕುಮಾರ್ ಕೊಡ್ಮಾಣ್ ಮಾಲಕತ್ವದ"ಸುರಭಿ ಸ್ಟೀಲ್ ಇಂಜಿನಿಯರಿಂಗ್" ಇಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆಯನ್ನು ಅರ್ಚಕ ಮುರಳಿ ಭಟ್ ಕಲ್ಲತಡಮೆ ಇವರ ನೇತೃತ್ವದಲ್ಲಿ ಗಣಹೋಮ, ಲಕ್ಷ್ಮೀ ಪೂಜೆ ಸಹಿತ ಪೂಜಾ ವಿಧಿ ವಿಧಾನದೊಂದಿಗೆ ಆಯುಧ ಪೂಜಾ ಕಾರ್ಯಕ್ರಮವು ನೆರವೇರಿತು.


ಈ ಸಂದರ್ಭದಲ್ಲಿ ಪ್ರಮುಖರಾದ ಉದ್ಯಮಿ ಅಜಿತ್ ಚೌಟ ದೇವಸ್ಯ, ಪ್ರಕಾಶ್ಚಂದ್ರ ರೈ ದೇವಸ್ಯ, ಚಂದ್ರ ಪ್ರಕಾಶ ಶೆಟ್ಟಿ ತುಂಬೆಗುತ್ತು, ಜ್ಯೋತಿಷಿ ಅನಿಲ್ ಪಂಡಿತ್, ಮಹಮ್ಮದ್ ವಲವೂರು,

ಪ್ರಕಾಶ್ ಬಿ ಶೆಟ್ಟಿ ಶ್ರೀ ಶೈಲ, ಜಗನ್ನಾಥ್ ಶೆಟ್ಟಿ ತುಂಬೆ ಗುತ್ತು, ಮಹೇಶ್ ನಾಯಕ್ ಕಾರ್ಕಳ ಸಹಿತ ಅನೇಕ ಬಂಧುಗಳು, ಸಂಸ್ಥೆಯ ನೌಕರರು ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು

Leave a Comment