ಬಂಟ್ವಾಳ: ಗುತ್ತಿಗೆದಾರರಾದ ಅಶ್ವಿನ್ ಮುಂಡಾಜೆ ಮಾಲಕತ್ವದ ಕಟ್ಟಡ ನಿರ್ಮಾಣ ಸಂಸ್ಥೆ "ಶಬರಿ ಕನ್ಸ್ಟ್ರಕ್ಷನ್" ಇದರ ನೂತನ ಕಚೇರಿಯ ಶುಭಾರಂಭವು ಬಿ ಸಿ ರೋಡ್ ಕೈಕಂಬದ ಪೊಳಲಿ ದ್ವಾರದ ಬಳಿ ಅ. 5ರಂದು ಆದಿತ್ಯವಾರ ಶುಭಾರಂಭಗೊಂಡಿತು.
ಭಾರತ್ ಆಗ್ರೋವೇಟ್ ತುಂಬೆ ಇದರ ಮಾಲಕರಾದ ದಯಾನಂದ ಡಿ ರೈ ಕಚೇರಿಯನ್ನು ಉದ್ಘಾಟಿಸಿ ಶುಭ
ಹಾರೈಸಿದರು, ಈ ಸಂದರ್ಭದಲ್ಲಿ ಶಶಿಧರ್ ಶೆಟ್ಟಿ, ವೆಂಕಟೇಶ್ ಶಾಂತಿ, ರಾಜೇಶ್ ಬರೆ ಸಹಿತ ಅನೇಕ ಬಂಧುಗಳು ಆಗಮಿಸಿ ಶುಭ ಹಾರೈಸಿದರು.















