ಬಂಟ್ವಾಳ :ಕುಲಾಲ ಸುಧಾರಕ ಸಂಘ (ರಿ.) ಫರಂಗಿಪೇಟೆ ನಾಣ್ಯ ಮಾರಿಪಳ್ಳ,ಹಾಗೂ ಕುಲಾಲ ಮಹಿಳಾ ಘಟಕದ ನೇತೃತ್ವದಲ್ಲಿ ಆ.08ನೇ ಶುಕ್ರವಾರದಂದು ಸಂಜೆ ಗಂಟೆ 4.00ರಿಂದ ಕುಲಾಲ ಸಮುದಾಯ ಭವನದಲ್ಲಿ 21ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ನಡೆಯಲಿದೆ.
ಅಂದು ಬೆಳಿಗ್ಗೆ ಗಂಟೆ 6.00ಕ್ಕೆ ಗಣಹೋಮ, ಸಂಜೆ 3.00ರಿಂದ ಭಜನೆ ಸಂಜೆ ಗಂಟೆ 4.00ರಿಂದ ಶ್ರೀ
ವರಮಹಾಲಕ್ಷ್ಮೀ ಪೂಜೆ, ಸಂಜೆ 6.00ಕ್ಕೆ ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.















