ಫರಂಗಿಪೇಟೆ: ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಹಾಗೂ ದವಸಧಾನ್ಯದ ಕಿಟ್ ವಿತರಣೆ. ಸೇವಾಂಜಲಿಯ ಸೇವಾ ಕಾರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಿದೆ: ಗಣೇಶ್ ಸಾಲಿಯಾನ್ ತುಂಬೆ

Coastal Bulletin
ಫರಂಗಿಪೇಟೆ: ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಹಾಗೂ ದವಸಧಾನ್ಯದ ಕಿಟ್ ವಿತರಣೆ. ಸೇವಾಂಜಲಿಯ ಸೇವಾ ಕಾರ್ಯಕ್ಕೆ ನಾವೆಲ್ಲ ಕೈ ಜೋಡಿಸಬೇಕಿದೆ: ಗಣೇಶ್ ಸಾಲಿಯಾನ್ ತುಂಬೆ

ಬಂಟ್ವಾಳ: ಜಾತಿ, ಧರ್ಮದ ಭೇದವಿಲ್ಲದೆ ಸಮಾಜದ ಎಲ್ಲಾ ವರ್ಗದ, ಎಲ್ಲಾ ಸಮುದಾಯದ ಜನರಿಗೂ ಸೇವಾಂಜಲಿ ಪ್ರತಿಷ್ಠಾನ ನಿರಂತರವಾಗಿ ಜನರ ವಿಶ್ವಾಸದಿಂದ ಸೇವಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದೆ.‌ ಕಳೆದ ಎರಡೂವರೆ ವರುಷದಿಂದ ದಾನಿಗಳ ಸಹಕಾರದೊಂದಿಗೆ ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ವಿತರಿಸುವ ಕಾರ್ಯ ಶ್ರೇಷ್ಠವಾದದ್ದು ನಾವೆಲ್ಲರೂ ಕೃಷ್ಣ ಕುಮಾರ್ ಪೂಂಜ ಅವರ ನೇತೃತ್ವದ ತಂಡಕ್ಕೆ ಸಹಕಾರ ನೀಡಬೇಕಿದೆ ಎಂದು ತುಂಬೆ ಗ್ರಾ.ಪಂ‌ ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ ಹೇಳಿದರು.

ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ‌ ಸಭಾಂಗಣದಲ್ಲಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫೆ. 5ರಂದು ಬುಧವಾರ  ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರ ಹಾಗೂ ದವಸಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. 

ಈ ಸಂದರ್ಭದಲ್ಲಿ ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿ ಕ್ಷಯ ರೋಗಿಗಳು ಪ್ರತಿತಿಂಗಳು ಇಮೋಗ್ಲೋಬಿನ್,

ರಕ್ತದೊತ್ತಡ, ಶುಗರ್ ತೂಕ ಪರೀಕ್ಷೆ ಮಾಡಿಕೊಳ್ಳಬೇಕು, ಆಹಾರ ಪದ್ದತಿಯನ್ನು ಯುಕ್ತವಾಗಿ ಪಾಲಿಸಿಕೊಂಡು ಪೌಷ್ಠಿಕ ಆಹಾರವನ್ನು ಸೇವಿಸಬೇಕು ಎಂದು ತಿಳಿಸಿದರು. 

ಕುಮ್ಡೇಲು ಶ್ರೀ ಕೋರ್ದಬ್ಬು ದೈವಸ್ಥಾನದ ಆಡಳಿತ ಮೋಕ್ತೇಸರ ಕೆ.ಭಾಸ್ಕರ ಚೌಟ, ನಾರಾಯಣ ಬಡ್ಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಸೇವಾಂಜಲಿಯ ಟ್ರಸ್ಟಿ ಕೊಡ್ಮಾನ್ ದೇವದಾಸ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮಾ ಚಂದ್ರಶೇಖರ್ ವಂದಿಸಿದರು.

Leave a Comment