ಮಂಗಳೂರು :ಪ್ರೀತಿ ಗೇಮ್ಸ್ ಕ್ಲಬ್ ಇದರ 40ನೇ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 4 ರಂದು ಶನಿವಾರ ಪೆರ್ಮಂಕಿ ಕ್ಲಬ್ ನ ವಠಾರದಲ್ಲಿ ನಡೆಯಿತು. ಬೆಳಿಗ್ಗೆ ಗಣ ಹೋಮ, ಶ್ರೀ ಸದಾಶಿವ ದೇವಸ್ಥಾನದಲ್ಲಿ ಸಾರ್ವಜನಿಕ ಶನೇಶ್ವರ ಪೂಜೆ ಮತ್ತು ಅನ್ನ ಸಂತರ್ಪಣೆ ಜರಗಿತು
ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿ ಸಂಘದ ಸದಸ್ಯರ ಸಮಾಜ ಸೇವೆ ಮತ್ತು ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಮುಲ್ಕಿ ಮಾತನಾಡಿ ಸಂಘದ ಸೌಹಾರ್ದಯುತ ಒಗ್ಗಟ್ಟು, ನಡೆಸುತ್ತಿರುವ ಸಮಾಜಮುಖಿ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಪದ್ಮನಾಭ ಕೋಟ್ಯಾನ್ (ಬಿ. ಎಲ್. ಪಿ) ಇವರು ಸಂಘದ ಶಿಸ್ತು, ಅಭಿವೃದ್ಧಿ ಮತ್ತು ಸಮಾಜದ ಒಳಿತಿಗಾಗಿ ನೀಡುತ್ತಿರುವ ಕೊಡುಗೆಯ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಉಳಾಯಿಬೆಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿ ಮಾತನಾಡಿ, ಪಂಚಾಯಿತಿನ ಕಾರ್ಯ ಯೋಜನೆಯನ್ನು ಜನತೆಗೆ ತಲುಪಿಸುವ ಕೆಲಸದಲ್ಲಿ ಸಂಘವು ಅವಿರತವಾಗಿ ಶ್ರಮಿಸುವುದರ ಬಗ್ಗೆ ತಿಳಿಸಿದರು.
40ನೇ ವರ್ಷದ ಸವಿ ನೆನಪಿಗಾಗಿ "ಪ್ರೀತಿಯ ಹಸ್ತ" ಎಂಬ ಚಾರಿಟೇಬಲ್ ಟ್ರಸ್ಟ್ ನ ಉದ್ಘಾಟನೆಯನ್ನು
ಮಾಡಲಾಯಿತು.ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಕುಮಾರಿ ಚರಿಷ್ಮಾ ಇವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನವನ್ನು ನೀಡಲಾಯಿತು.
ಸಮಾರಂಭದಲ್ಲಿ ಎನ್. ರವಿರಾಜ್ ರಾವ್, ಪದ್ಮನಾಭ ಶೆಟ್ಟಿ, ಶ್ರೀಮತಿ ರತ್ನ ಸುರೇಶ್, ದಿನೇಶ್ ಪೆರ್ಮಂಕಿ, ಶ್ರೀಧರ ಪೂಜಾರಿ, ಜಯಂತ ಪೂಜಾರಿ, ಶರೀಫ್ ಕಣಿಬೆಟ್ಟು, ವಿಲಿಯಂ ಮೋರಾಸ್, ಜಾನ್ ಮೋರಾಸ್, ಪ್ರಶಾಂತ್ ಸಲ್ದಾನ ಉಪಸ್ಥಿತರಿದ್ದರು.
ಕುಮಾರಿ ಲಹರಿ ಮತ್ತು ಕುಮಾರಿ ಹರ್ಷ ಪೂಜಾರಿ ಸಹಕರಿಸಿದರು. ಸುನಿಲ್ ಕುಮಾರ್ ಸ್ವಾಗತಿಸಿದರು. ಪವನ್ ಕುಲಾಲ್ ವಂದನಾರ್ಪಣೆಗೈದರು. ಶ್ರೀನಾಥ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ನಡೆಯಿತು,ಬಳಿಕ ಅತಿಥಿ ಕಲಾವಿದರು ಮತ್ತು ಕ್ಲಬ್ ಸದಸ್ಯರ ಸೇರುವಿಕೆಯಿಂದ "ದಾಲ ಉಂಡಾ" ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕ ಜನಮನ ಸೆಳೆಯಿತು.














