Coastal Bulletin

ಬಂಟ್ವಾಳ :ತುಳುನಾಡಿನ ಗಂಡು ಕಲೆ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಯಕ್ಷ ಸಂಘಟಕ, ನಿರೂಪಕ, ಬಿ ಜನಾರ್ಧನ ಅಮ್ಮುಂಜೆ ಇವರ ಬಟ್ಲಬೆಟ್ಟು ಶ್ಯಮಂತಕ ನಿವಾಸದಲ್ಲಿ ಅಪೂರ್ವ ಯಕ್ಷಗಾನ ಕಲಾ ಸಂಭ್ರಮವು ಫೆ.8ರಂದು ಬುಧವಾರ ನಡೆಯಲಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಶ್ಯಮಂತಕ ಮನೆಯ ಮುಂಭಾಗದಲ್ಲಿ ಅಂದು ಸಂಜೆ "ಕಲ್ಯಾಣೋತ್ಸವ" ಯಕ್ಷಗಾನ ಬಯಲಾಟ ಜರಗಲಿದೆ.


ಈ ಸಂದರ್ಭದಲ್ಲಿ ಭಜನೆ. ನಂತರ ಚೌಕಿಪೂಜೆಯ ಬಳಿಕ ಗೌರವಭಿನಂದನೆ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಕಟೀಲಿನ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣರು ಹಾಗೂ ಶ್ರೀ ಶ್ರೀಹರಿ ನಾರಾಯಣದಾಸ

ಅಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ.

ಜಮೆಹಿತ್ಲು ಕೃಷ್ಣ ಪೂಜಾರಿಯವರಿಗೆ ಗೌರವಭಿನಂದನೆ,ಯಕ್ಷ ಕಲಾವಿದ ಪುಂಡಿಕಾಯಿ ಗೋಪಾಲ ಕೃಷ್ಣ ಭಟ್ ರಿಗೆ ಸನ್ಮಾನ ಹಾಗೂ ಗುಂಡಿಲ ಗುತ್ತು ಶಂಕರ್ ಶೆಟ್ಟಿ, ರಾಜೀವ ಕೈಕಂಬ, ಅಬೂಬಕ್ಕರ್ ಅಮ್ಮುಂಜೆ,ಲವೀನಾ ಕುಟೀನೋ, ವೆಂಕಟೇಶ ನಾವಡ ಪೊಳಲಿ ಇವರಿಗೆ ಉಪಕೃತ ಸನ್ಮಾನ ನಡೆಯಲಿದೆ.ರಾತ್ರಿ 7.30ಕ್ಕೆ ಅನ್ನಸಂತರ್ಪಣೆ ಜರುಗಲಿದೆ ಎಂದು ಸಂಘಟಕ ಜನಾರ್ಧನ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment