ಬಂಟ್ವಾಳ :ವಿದ್ಯಾ ಯುವಕ ಮಂಡಲ ಅಬ್ಬೆಟ್ಟು, ಮೇರಮಜಲು, ಇದರ 32ನೇ ವಾರ್ಷಿಕೋತ್ಸವ ಸಮಾರಂಭವು ಜ.04ರಂದು ಶನಿವಾರ ಅಬ್ಬೆಟ್ಟು ಸರಕಾರಿ ಶಾಲಾ ರಂಗ ಮಂದಿರದಲ್ಲಿ ಜರುಗಿತು.
ಸಂಜೆ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇರಮಜಲು ಗ್ರಾ ಪಂ ಅಧ್ಯಕ್ಷೆ ಜಯಶ್ರೀ ಕರ್ಕೇರ ವಹಿಸಿದ್ದರು.ಅತಿಥಿಗಳಾಗಿ ಸಂಸ್ಕಾರ ಭಾರತಿ ಮಂಗಳೂರು ಇದರ ಅಧ್ಯಕ್ಷರಾದ ಪುರುಷೋತ್ತಮ್ ಕೆ ಭಂಡಾರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪುತ್ತೂರು ಜಿಲ್ಲಾ ಸಂಘಚಾಲಕರಾದ ಕೊಡಮಣ್ಣು ಕಾಂತಪ್ಪ ಶೆಟ್ಟಿ, ಭೂ ಅಭಿವೃದ್ದಿ ಬ್ಯಾಂಕ್ ಬಿಸಿರೋಡ್ ಇದರ ಅಧ್ಯಕ್ಷರಾದ ಅರುಣ್ ರೋಶನ್ ಡಿ ಸೋಜಾ,ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ಪರಂಗಿಪೇಟೆ ಇದರ ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ,ಇಂದು ಲಕ್ಷ್ಮೀ ಸಮೂಹ ಸಂಸ್ಥೆಯ ಬಿ.ಕಮಲಾಕ್ಷ ಶೆಟ್ಟಿ,ವಿದ್ಯಾ ಯುವಕ ಮಂಡಲದ ಅಧ್ಯಕ್ಷರಾದ
ಜಯರಾಮ ಶೆಟ್ಟಿ,ಹಿರಿಯರಾದ ಸೋಮಪ್ಪ,ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಬ್ಬೆಟ್ಟು ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕಿಯರಾದ ರೋಜಿ ಲೋಬೊ ಹಾಗೂ ಶ್ರೀಮತಿ ಪುಷ್ಪ, ಮಿಲಿಟರಿ ಸೇವೆ ಸಲ್ಲಿಸುತ್ತಿರುವ ಯೋಧ ಸ್ಕಂದ ರಾಜ್,ಆದರ್ಶ ದಂಪತಿಗಳಾದ ವಾರಿಜ ಗಣಪ ಪೂಜಾರಿ, ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಪವನ್ ಸ್ವಾಗತಿಸಿ ಧನ್ಯವಾದವಿತ್ತರು.ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು,
ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರುಗಿ,ಅನ್ನಸಂತರ್ಪಣೆ ನಡೆಯಿತು.ಸಂಜೆ ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ,ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಹಾಗೂ ರಂಗ ತರಂಗ ಕಲಾವಿದೆರ್ ಕಾಪು ಇವರ ಅದ್ಯೇಕ್ಷೆರ್ ನಾಟಕವು ಜನಮನ ಸೆಳೆಯಿತು.














