ಬಂಟ್ವಾಳ : ತಾಲೂಕಿನ ಕಳ್ಳಿಗೆ ಗ್ರಾಮದ ಲಕ್ಷ್ಮೀ ವಿಷ್ಣು ಸೇವಾ ಸಂಘ(ರಿ )ಹಾಗೂ ಲಕ್ಷ್ಮೀ ವಿಷ್ಣು ಸೇವಾ ಮಾತೃ ಮಂಡಳಿ(ರಿ )ಜಾರಂದಗುಡ್ಡೆ ಕಳ್ಳಿಗೆ,ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ಶ್ರೀ ಶನಿಪೂಜೆ, ಸಾಂಸ್ಕೃತಿಕ ವೈವಿದ್ಯ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ,ಸಭಾ ಕಾರ್ಯಕ್ರಮವು ಫೆ.11ರಂದು ಶನಿವಾರ ನಡೆಯಲಿದೆ.
ಬೆಳಿಗ್ಗೆ ಸಾಮೂಹಿಕ ಶ್ರೀ ಶನಿಪೂಜೆ ಜರುಗಿ ಮಧ್ಯಾಹ್ನ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ, ಸಂಜೆ 6.30 ರಿಂದ ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. 7 ಗಂಟೆಯಿಂದ ಸಭಾ ಕಾರ್ಯಕ್ರಮ ಇರಲಿದೆ.ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಳಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ವಹಿಸಲಿದ್ದಾರೆ. ಯುವ ವಾಗ್ಮಿ ಶ್ರೀ ದೇವಿ ಪುತ್ತೂರು ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಗಣ್ಯರು
ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ಬೋಜರಾಜ್ ವಾಮಂಜೂರು, ಕಾಂತಾರ ಚಿತ್ರದ ಗುರುವ ಖ್ಯಾತಿಯ ನಟ ಸ್ವರಾಜ್ ಶೆಟ್ಟಿ ಮಂಗಳೂರು ಮತ್ತು ತುಳು ಚಲನಚಿತ್ರ ಹಾಸ್ಯ ನಟ ಮಂಜು ರೈ ಬರಲಿದ್ದಾರೆ.
ರಾತ್ರಿ ಸಂಗೀತ ರಸ ಸಂಜೆ ಕಾರ್ಯಕ್ರಮಕ್ಕೆ ಖ್ಯಾತ ಗಾಯಕರಾದ ಪ್ರಕಾಶ್ ಮಹಾದೇವನ್ ಹಾಗೂ ರೂಪ ಪ್ರಕಾಶ್ ಮಹಾದೇವನ್ ಭಾಗವಹಿಲಿದ್ದಾರೆ , ಡ್ಯಾನ್ಸ್,ಹಾಗೂ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರ "ಆರ್ ಪನ್ಲೆಕ" ಎಂಬ ತುಳು ಹಾಸ್ಯಮಯ ನಾಟಕ ಇರಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














