ಬಂಟ್ವಾಳ :ಕಳೆದ 6ವರ್ಷಗಳಿಂದ 1700ಅಧಿಕ ಕುಟುಂಬಗಳಿಗೆ ಸುಮಾರು 9ಕೋಟಿ ಮೊತ್ತವನ್ನು ದಾನಿಗಳ ಸಹಕಾರದಿಂದ ಸಮಾಜಕ್ಕೆ ಅರ್ಪಣೆಗೈದ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2025 ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್ಕರ್ ಇವರಿಗೆ ಸೇವಾಸಂಸ್ಥೆಗಳ ಸಹಭಾಗಿತ್ವದಲ್ಲಿ ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಹುಟ್ಟೂರ ಸನ್ಮಾನವನ್ನು ಡಿ 07 ರ ಆದಿತ್ಯವಾರ ಬೆಳಿಗ್ಗೆ 9ರಿಂದ 10.30ರವರೆಗೆ ಸ್ವರ್ಣಸಭಾ ಸಭಾಂಗಣ ರಾಜಸೌಧ ಬಂಟ್ವಾಳದಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
















