ನೆತ್ತರಕೆರೆ: ಡಿ.07ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ

Coastal Bulletin
ನೆತ್ತರಕೆರೆ: ಡಿ.07ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ

ಬಂಟ್ವಾಳ :ಶತಮಾನವನ್ನು ಪೂರೈಸಿದ ತಾಲೂಕಿನ ಪ್ರತಿಷ್ಠಿತ ವಿದ್ಯಾ ಸಂಸ್ಥೆ ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ, ನೆತ್ತರಕೆರೆ ಇಲ್ಲಿನ ಶಾಲಾ ವಾರ್ಷಿಕೋತ್ಸವವು ಡಿ.07ರಂದು ಆದಿತ್ಯವಾರ ಬೆಳಿಗ್ಗೆ 9-00ರಿಂದ ಸಂಜೆ 7-30ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಅಂದು ಪೂರ್ವಾಹ್ನ ಗಂಟೆ 9.00ಕ್ಕೆ ಧ್ವಜಾರೋಹಣ ಹಾಗೂ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬಳಿಕ ವರ್ಗಾವಣೆಗೊಂಡ ಶಿಕ್ಷಕಿ ಅನಿತಾ ಸ್ಯಾಂಡ್ರಾ ಮೋನಿಸ್ ಇವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದ್ದು, 10.00

ರಿಂದ 1.00 ರವರೆಗೆ ಪೋಷಕರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ.

ಸಂಜೆ 4.00ರಿಂದ ವಿದ್ಯಾರ್ಥಿಗಳಿಂದ ಸಾಮೂಹಿಕ ಕವಾಯತು ಪ್ರದರ್ಶನ,ಬಹುಮಾನ ವಿತರಣೆ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Leave a Comment