ಕೊಡ್ಮಾಣ್: ಅ.9 ರಿಂದ12ವರೆಗೆ 36ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ.

Coastal Bulletin
ಕೊಡ್ಮಾಣ್: ಅ.9 ರಿಂದ12ವರೆಗೆ 36ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವ.

ಬಂಟ್ವಾಳ: ಶ್ರೀ ಶಾರದಾ ಪೂಜಾ ಸೇವಾ ವೇದಿಕೆ, ಕೊಡ್ಮಾಣ್ ಇವರ ಅಶ್ರಯದಲ್ಲಿ ನವರಾತ್ರಿಯ ಪವಿತ್ರತೆಯನ್ನು ಪ್ರತಿಬಿಂಬಿಸುವ 36ನೇ ವರ್ಷದ ಶ್ರೀಶಾರದಾ ಪೂಜಾ ಮಹೋತ್ಸವವು ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಕೊಡ್ಮಾಣ್ ಇಲ್ಲಿನ ಶ್ರೀ ಶಾರದಾ ಮಂಟಪದಲ್ಲಿ ಅ.09 ಬುಧವಾರದಿಂದ ಅ.12ನೇ ಶನಿವಾರ ತನಕ ಸಂಭ್ರಮದಿಂದ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆ ತಿಳಿಸಿದೆ.

ವಿ ಸೂ :ಅ. 6ರಂದು ಆದಿತ್ಯವಾರ ಸಂಜೆ 4ರಿಂದ ಮದಕ ಶ್ರೀಕೃಷ್ಣ ಲೀಲೋತ್ಸವ

ಸ್ಥಳದಿಂದ ಕೊಡ್ಮಾಣ್ ಶಾಲೆಯ ಶಾರದಾ ಮಂಟಪದ ವರೆಗೆ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ

Leave a Comment