ಬಂಟ್ವಾಳ :ಬಜಿರೆ ವಲಯ ಮಟ್ಟಡ ಪ್ರತಿಭಾ ಕಾರಂಜಿ ಸ್ಪರ್ಧೆಯು ಸರಕಾರಿ ಉನ್ನತ್ತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಹುಲಿಮೇರು ವಹಿಸಿದರು. ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಚಂದ್ರ ಜೈನ್ ಕಾರ್ಯಕ್ರಮವನ್ನು ಉಧ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ತೇಜಸ್ವಿನಿ, ಸದಸ್ಯರಾದ ಸತೀಶ್ ಪೂಜಾರಿ ಪ್ರಭಾಕರ ಹೆಚ್ ಸುರೇಂದ್ರ , ರೋಟರಿ ಕ್ಲಬ್ ಲೊರೆಟೋ ಹಿಲ್ಸ್ ಬಂಟ್ವಾಳ ಇದರ ಅಧ್ಯಕ್ಷರಾದ ರೋ.ಸುರೇಶ್ ಶೆಟ್ಟಿ, ತಾಲೂಕು ಬಿಐಇಆರ್ ಟಿ ಜಗದೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕೋಶಾಧಿಕಾರಿ ರಾಜೇಶ್ ನೆಲ್ಯಾಡಿ, ನಿಟ್ಟಡೆ ಕ್ಲಸ್ಟರ್ ಸಿಆರ್ ಪಿ ಆರತಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರೋ. ರಾಘವೇಂದ್ರ ಭಟ್ ಉದ್ಯಮಿಗಳಾದ ಎಸ್ .ಮಹಮ್ಮದ್ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಘುಣಿ ಇದರ ಕಾರ್ಯದರ್ಶಿ ರೋ.ಪದ್ಮನಾಭ ಕೋಟ್ಯಾನ್,
ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಲೊರೆಟೋ ಹಿಲ್ಸ್ ಬಂಟ್ವಾಳ ಇವರ ವತಿಯಿಂದ ಶಾಲಾ ಗೌರವ ಶಿಕ್ಷಕಿಯರ ಗೌರವಧನವನ್ನು ಶಾಲೆಗೆ ಹಸ್ತಂತರಿಸಲಾಯಿತು ಬಜಿರೆ ಕ್ಲಸ್ಟರ್ ನ ಸಿಆರ್ ಪಿ ರಾಜೇಶ್ ರವರು ಸ್ವಾಗತಿಸಿ ಶಾಲಾ ಮುಖ್ಯ ಶಿಕ್ಷಕರಾದ ಸುಮಿತ್ರರವರು ವಂದಿಸಿದರು ,ಶಾಲಾಭಿವೃದ್ದಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು .ಶಾಲಾ ಶಿಕ್ಷಕರಾದ ಶ್ರೀಮತಿ ಸುಚಿತ್ರ ಹಾಗೂ ಮೆಟಿಲ್ಡಾ ಡಿ`ಸೋಜಾ ರವರು ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಿಎಮ್ ಶ್ರೀ ಬಜಿರೆ ಶಾಲೆಯು ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಹಾಗೂ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.















