ಬಿ.ಸಿ.ರೋಡು: ಕಾಂಗ್ರೆಸ್ ಪ್ರತಿಭಟನೆ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ. ಸರ್ಕಾರ ಇಂಧನ ಬೆಲೆ ಏರಿಕೆ ಮೂಲಕ ಜನತೆಗೆ 'ಅಚ್ಚೇ ದಿನ್' :ಮಾಜಿ ಸಚಿವ ರೈ

Coastal Bulletin
ಬಿ.ಸಿ.ರೋಡು: ಕಾಂಗ್ರೆಸ್ ಪ್ರತಿಭಟನೆ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ. ಸರ್ಕಾರ ಇಂಧನ ಬೆಲೆ ಏರಿಕೆ ಮೂಲಕ ಜನತೆಗೆ 'ಅಚ್ಚೇ ದಿನ್' :ಮಾಜಿ ಸಚಿವ ರೈ

ಬಂಟ್ವಾಳ:ದೇಶದಲ್ಲಿ ಪದೇ ಪದೇ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದ್ದರೂ ಯಾವುದೇ ರೀತಿಯ ತನಿಖೆ ನಡೆಸಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ ಇಂಧನ ಬೆಲೆ ಏರಿಕೆ ಮೂಲಕ ಜನತೆಗೆ 'ಅಚ್ಚೇ ದಿನ್' ನೀಡಿದ್ದಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಲೇವಡಿ ಮಾಡಿದ್ದಾರೆ. ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ವಕ್ತಾರ ಎಂ.ಜಿ.ಹೆಗ್ಡೆ ಮಾತನಾಡಿ, 'ದೇಶದಲ್ಲಿ ಈ ಹಿಂದೆ ಎಲ್ಲಾ ಪ್ರಧಾನಿಗಳು ಸೇರಿ ಒಟ್ಟು ರೂ 50ಲಕ್ಷ ಕೋಟಿ ಸಾಲ ಮಾಡಿದ್ದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬರೇ ರೂ 1.60ಲಕ್ಷ ಕೋಟಿ ಮೊತ್ತದ ಸಾಲದ ಕೂಪಕ್ಕೆ ದೇಶವನ್ನು ತಳ್ಳಿದ್ದಾರೆ' ಎಂದು ಆರೋಪಿಸಿದರು.

ಕೇವಲ ಮಾಧ್ಯಮ ಪ್ರಚಾರಕ್ಕೆ ರೂ 4 ಸಾವಿರ ಕೋಟಿ ಮೀಸಲಿಟ್ಟ ಪ್ರಧಾನಿ ತನ್ನನ್ನು ಅಮೇರಿಕ ಅಧ್ಯಕ್ಷರಿಗೆ ಮಾರಿಕೊಂಡಿದ್ದಾರೆ. ಈಗ ಕಚ್ಚಾ ತೈಲ ಕಡಿಮೆ ಇದ್ದರೂ ಇಂಧನ ಬೆಲೆ ಏರಿಸುವ ಮೂಲಕ ಬಂಡವಾಳಶಾಹಿಗಳಿಗೆ ನೆರವಾಗಿ ಜನತೆಯನ್ನು ಮರುಳು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಪ್ರಕಾಶ

ಶೆಟ್ಟಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಬೂಡ ಅಧ್ಯಕ್ಷ , ಬೇಬಿ ಕುಂದರ್, ಪ್ರಮುಖರಾದ ಬಿ. ಪದ್ಮಶೇಖರ್ ಜೈನ್, ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಕೆ.ಪದ್ಮನಾಭ ರೈ, ಸುದೀಪ್ ಕುಮಾರ್ ಶೆಟ್ಟಿ, ವಾಸು ಪೂಜಾರಿ, ಸಂಪತ್ ಕುಮಾರ್ ಶೆಟ್ಟಿ, ಕೆ.ಸಂಜೀವ ಪೂಜಾರಿ, ಅಬ್ಬಾಸ್ ಆಲಿ, ಸದಾಶಿವ ಬಂಗೇರ, ನವಾಜ್ ಬಡಕಬೈಲು, ಸುಭಾಶ್ಚಂದ್ರ ರೈ,  ಉಮೇಶ್ ಬೋಳಂತೂರು, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಮಹಮ್ಮದ್ ನಂದಾವರ, ಮೋಹನ ಶೆಟ್ಟಿ, ಸಿದ್ದಿಕ್ ಗುಡ್ಡೆಯಂಗಡಿ, ಲೋಲಾಕ್ಷ ಶೆಟ್ಟಿ, ಮಧುಸೂಧನ್ ಶೆಣೈ, ಉಮ್ಮರ್ ಮಂಚಿ, ಜಯಂತಿ ಪೂಜಾರಿ, ಜೆಸಿಂತಾ ಡಿಸೋಜ, ಜೋಸ್ಪಿನ್ ಡಿಸೋಜ, ಶೈಲಜಾ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು 


Leave a Comment