Coastal Bulletin

ಬಂಟ್ವಾಳ: ತಾಲ್ಲೂಕಿನ ಮಂಚಿಯಲ್ಲಿ ಬುಧವಾರ ಆರಂಭಗೊಂಡ ಕ್ಯಾಂಪ್ಕೋ ನೂತನ ಶಾಖೆಯನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟಿಸಿದರು.

ಕ್ಯಾಂಪ್ಕೋ ವತಿಯಿಂದ ಮುಂದಿನ ದಿನಗಳಲ್ಲಿ ತೆಂಗು ಖರೀದಿಗೆ ಸಂಸ್ಥೆ ನಿರ್ಧರಿಸಿದ್ದು, ಶೇ. 100 ತೆರಿಗೆ ಪಾವತಿಸುವ ಅಧಿಕೃತ ಸಂಸ್ಥೆಗಳಿಗೆ ಮಾತ್ರ ಬೆಳೆಗಾರರು ಅಡಿಕೆ ಮಾರಾಟ ಮಾಡುವ ಮೂಲಕ ಮೋಸದಿಂದ ಪಾರಾಗಬಹುದು ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಈ ಸಂದರ್ಭದಲ್ಲಿ ಹೇಳಿದ್ದಾರೆ.ಇಲ್ಲಿನ ಮಂಚಿಯಲ್ಲಿ ಬುಧವಾರ ಆರಂಭಗೊಂಡ ಕ್ಯಾಂಪ್ಕೋ ನೂತನ ಶಾಖೆ ಉದ್ಘಾಟನೆ ಮತ್ತು ಬೆಳೆಗಾರರ ಸಮಾವೇಶದಲ್ಲಿ ಅವರು ಮಾತನಾಡಿದರು. ಕಳೆದ ಸಾಲಿನಲ್ಲಿ ಕ್ಯಾಂಪ್ಕೋ ರೂ 2200 ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದ್ದು ಸದಸ್ಯರಿಗೆ ಶೇ 15ರಷ್ಟು ಡಿವಿಡೆಂಟ್ ನೀಡಿದೆ. ಸದಸ್ಯರಿಗೆ ಆರೋಗ್ಯ ವಿಮಾ ಸೌಲಭ್ಯ ನೀಡಲು ಸಂಸ್ಥೆ ಚಿಂತನೆ ನಡೆಸಿದೆ ಎಂದರು. 

ಶಾಸಕ ಯು.ರಾಜೇಶ್ ನಾಯ್ಕ್ ಉಳಿಪಾಗಿತ್ತು ನೂತನ ಶಾಖೆ ಉದ್ಘಾಟಿಸಿದರು. ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ಸದಸ್ಯರ ಆಶೋತ್ತರ ಈಡೇರಿಕೆ ಕ್ಯಾಂಪ್ಕೊ ಸಾಮಾಜಿಕ ಬದ್ಧತೆಯಲ್ಲಿ

ಕೆಲಸ ಮಾಡುತ್ತಿದೆ ಎಂದರು. 

ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರ ನಾರಾಯಣ ಖಂಡಿಗೆ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಎಸ್. ಕಾಮತ್, ಉಪಾಧ್ಯಕ್ಷ ಮೋಹನದಾಸ್ ಶೆಟ್ಟಿ, ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮ್ಮರ್.ಬಿ ಮಂಚಿ, ಸಿಇಒ ಟಿ.ನಾರಾಯಣ್, ಕ್ಯಾಂಪ್ಕೊ ನಿದರ್ೇಶಕರಾದ ದಯಾನಂದ ಹೆಗ್ಡೆ, ಕೃಷ್ಣಪ್ರಸಾದ್ ಮಡ್ತಿಲ, ಪದ್ಮರಾಜ ಪಟ್ಟಾಜೆ, ಎಂ.ಮಹೇಶ್ ಚೌಟ, ರಾಘವೇಂದ್ರ ಭಟ್, ಜಯಪ್ರಕಾಶ ನಾರಾಯಣ, ಡಿಜಿಎಂ ಪ್ರಮೋದ್ ಕುಮಾರ್, ಎಜಿಎಂ ರಾಘವೇಂದ್ರ, ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಗೋವಿಂದ ಭಟ್, ಕಾಸರಗೋಡು ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್ ಇ., ವಿಟ್ಲ ಶಾಖಾ ಪ್ರಬಂಧಕ ಸಂದೇಶ್, ಬದಿಯಡ್ಕ ಶಾಖಾ ಪ್ರಬಂಧಕ ದಿನೇಶ್ ಕುಮಾರ್, ಅಡ್ಯನಡ್ಕ ಶಾಖಾ ಪ್ರಬಂಧಕ ವಿನೋದ್ ಶೆಟ್ಟಿ, ಮಂಚಿ ಶಾಖಾ ಪ್ರಬಂಧಕ ಶಿವಾನಂದ ಕಣ್ವತೀರ್ಥ, ಬೈಕಂಪಾಡಿ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರ ಬಿ.ಎಂ., ಪ್ರೇಮಲತಾ ಮತ್ತಿತರರು ಇದ್ದರು. 


  

Leave a Comment