Coastal Bulletin

ಬಂಟ್ವಾಳ: ಶಬರಿಮಲೆಗೆ ಪಾದಯಾತ್ರೆಯಲ್ಲಿ ಹೊರಟ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ತಂಡಕ್ಕೆ ದಾರಿ ಮಧ್ಯೆ ಸಿಕ್ಕ ಶ್ವಾನವೊಂದು ಅವರ ಜತೆಗೆ ಕಿಲೋ ಮೀಟರ್‌ಗಟ್ಟಲೆ ಹೆಜ್ಜೆ ಹಾಕಿ, ಅವರ ಜೊತೆಯಲ್ಲೇ ಇದ್ದು ಈಗ ಅವರ ಪ್ರೀತಿಯ , “ಮಲ್ಲಿ’ಯಾಗಿ ಅದನ್ನು ಊರಿಗೆ ತರುವುದಕ್ಕೆ ನಿರ್ಧರಿಸಿದ್ದಾರೆ.

ಮಣಿನಾಲ್ಕೂರು ಗ್ರಾಮದ ಬಡೆಕೊಟ್ಟಿನಿಂದ ಡಿ. 11ರಂದು ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ತಂಡವೊಂದು ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟಿತ್ತು. ತಂಡವು ಎಟ್ಟುಮಾನೂರ್‌ ತಲುಪಿದ ಸಂದರ್ಭದಲ್ಲಿಅವರ ಜತೆ ಶ್ವಾನವೊಂದು ಹೆಜ್ಜೆ ಹಾಕುಲು ಆರಂಭಿಸಿತ್ತು.ಬಳಿಕ ಆ ಶ್ವಾನ ಅವರ ಜೊತೆನೆ ಪಾದಯಾತ್ರೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತ್ತು.

ಹೀಗೆ ಸಾಗುತ್ತಿರುವ ವೇಳೆ ಮಣ್ಣಕಟ್ಟ ಬದ್ರಿ ದೇವಸ್ಥಾನದ ಬಳಿ ಶ್ವಾನ ದಾರಿ ತಪ್ಪಿ ತಮಿಳುನಾಡಿನ ತಂಡವೊಂದರ ಜತೆ ಹೋಯಿತು. ಬಳಿಕ ಅದಕ್ಕೆ 

ತನ್ನ ತಂಡ ಬೇರೆ ಎಂದು ತಿಳಿದು ಇವರನ್ನು ಹುಡುಕಿಕೊಂಡು ಬಂದಿತ್ತು ಎಂದು ವ್ರತಾಧಾರಿಗಳು ವಿವರಿಸುತ್ತಾರೆ.


3ರಂದು ಅಯ್ಯಪ್ಪ ವ್ರತಾಧಾರಿಗಳ ತಂಡ ಪಂಪೆಗೆ ತಲುಪಿದ್ದು, ಸ್ವಾಮಿಯ ಸನ್ನಿಧಿಗೆ ತೆರಳಿದ್ದಾರೆ. ತಂಡದ ಚೇತನ್‌ ಗುರುಸ್ವಾಮಿ ಅದನ್ನು ತಮ್ಮ ಊರಿಗೆ ಕರೆದುಕೊಂಡು ಬರುವುದಾಗಿ ನಿರ್ಧರಿಸಿ, ಹೀಗಾಗಿ “ಮಲ್ಲಿ’ಯನ್ನು ಹೊಟೇಲೊಂದರ ಬಳಿ ಕಟ್ಟಿ ಹಾಕಿದ್ದಾರೆ. ಸನ್ನಿಧಿಗೆ ಹೋಗಿ ಹಿಂದಿರ ವವರೆಗೆ ನೋಡಿಕೊಳ್ಳಿ, ಸ್ಥಳದ ಬಾಡಿಗೆ ಯನ್ನೂ ಕೊಡುತ್ತೇವೆ ಎಂದು ಹೊಟೇಲ್‌ನವರಲ್ಲಿ ವಿನಂತಿಸಿದ್ದಾರೆ.

Leave a Comment