ಸಂಗಬೆಟ್ಟು:ನ.8ರಂದು ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 14ನೇ ಶಾಖೆ ಶುಭಾರಂಭ

Coastal Bulletin
ಸಂಗಬೆಟ್ಟು:ನ.8ರಂದು ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 14ನೇ ಶಾಖೆ ಶುಭಾರಂಭ

ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಬಂಟ್ವಾಳ ಇದರ 14ನೇ ಶಾಖೆಯು ನ.8ರಂದು ಶನಿವಾರ ಸಂಗಬೆಟ್ಟುವಿನ ಸುದರ್ಶನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಜೈನ್‌ ಹೇಳಿದರು.

ಈ ಕುರಿತು ಬಿ ಸಿ ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಉದ್ಘಾಟನಾ ಸಮಾರಂಭದಲ್ಲಿ ಮೂಡಬಿದ್ರೆ ಜೈನ ಮಠದ ಪರಮಪೂಜ್ಯ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರು ಆಶೀರ್ವಚನ ನೀಡಲಿದ್ದಾರೆ. ದೀಪ ಪ್ರಜ್ವಲನೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ರಾಜೇಶ್ ನಾಯ್ಕ್ ಯು ಮಾಡಲಿದ್ದಾರೆ. ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಮಾಜಿ ಸಚಿವರು ಬಿ. ರಾಮನಾಥ ರೈ ಮಾಡಲಿದ್ದಾರೆ ಎಂದರು.

ಈ ಕಾರ್ಯಕ್ರಮಕ್ಕೆ ವಿಶೇಷ ಅಭ್ಯಗತರಾಗಿ ಪೂಂಜಾ ಶ್ರೀ ಪಂಚ ದುರ್ಗಾ ಪರಮೇಶ್ವರಿ ದೇವಸ್ಥಾನದ ಅಸ್ರಣ್ಣರು ಕೃಷ್ಣಪ್ರಸಾದ್, ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚಿನ ಧರ್ಮಗುರುಗಳು ಫಾ. ಡೇನಿಯಲ್ ಡಿ ಸೋಜ ಹಾಗೂ ಸಂಗಬೆಟ್ಟು ಕೆರೆಬಳಿ ಮುಹ್ಸಿಯುದ್ದೀನ್ ಜುಮಾ ಮಸೀದಿಯ ಖತೀಬರು ಜಿ. ಎಸ್ ಅನ್ಸಾರ್ ಸಖಾಫಿ ಅಲ್ಹಿಕಮಿ ಭಾಗವಹಿಸಲಿದ್ದಾರೆ ಎಂದರು.

ಭದ್ರತಾ ಕೊಠಡಿ ಉದ್ಘಾಟನೆಯನ್ನು ಮಂಗಳೂರಿನ ಧವಳ ಕೋ ಆಫ್ ಸೊಸೈಟಿ ಲಿ ಅಧ್ಯಕ್ಷಸುದರ್ಶನ್ ಜೈನ್, ಕಂಪ್ಯೂಟರ್ ಉದ್ಘಾಟನೆಯನ್ನು ಮಂಗಳೂರು ಸಹಕಾರಿ ಸಂಘಗಳ ಉಪನಿಬಂಧಕರು ಹೆಚ್ ಎನ್ ರಮೇಶ್ ಅವರು, ನಿರಖು ಠೇವಣಿ ಪತ್ರ ಉದ್ಘಾಟನೆಯನ್ನು ವಿಟ್ಲ ಟೀಚರ್ಸ್ ಕೋ ಆಫ್ ಸೊಸೈಟಿ ಲಿ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ನಿತ್ಯಾನಂದ

ನಿತ್ಯನಿಧಿ ಠೇವಣಿ ಉದ್ಘಾಟನೆಯನ್ನು ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಪ್ರಭಾಕರು ಪ್ರಭು ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜೀವಿ, ಸಂಗಬೆಟ್ಟು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಭಾಕರ ಐಗಳು, ಬಂಟ್ವಾಳ ತಾಲೂಕು ಮತ್ತು ದಕ್ಷಿಣ ಕನ್ನಡ ಜಿಲ್ಲೆ ವಕೀಲ ಸಂಘ(ರಿ ) ಅಧ್ಯಕ್ಷ ರಿಚಾರ್ಜ್ ಡಿಕೋಸ್ತಾ , ಸಿದ್ದಕಟ್ಟೆ ಹಾಲು, ಉತ್ಪಾದಕರ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ರತ್ನಕುಮಾರ್ ಚೌಟ, ಸಂಗಬೆಟ್ಟು ಪುರೋಹಿತರು ಹಾಗೂ ಸಹಕಾರಿಗಳು ಲಕ್ಷ್ಮಿ ನಾರಾಯಣ ಆಚಾರ್ಯ, ಸಿದ್ದಕಟ್ಟೆ ಉದ್ಯಮಿ ಅರ್ಕ ಕೀರ್ತಿ ಇಂದ್ರ, ಸಂಗಬೆಟ್ಟು ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರು ಚಂದ್ರಹಾಸ ಶೆಟ್ಟಿಗಾರ್ , ಕರ್ನಾಟಕ ಸಾವಯವ ಕೃಷಿ ಯೋಜನೆ (ರಿ) ಆಡಳಿತ ನಿರ್ದೇಶಕ ಮೋಹನ್ ಗೌಡ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಮಂಜುನಾಥ ರೈ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾ‌ರ್ ಜೈನ್, ನಿರ್ದೇಶಕರಾದ ವಿಜಯ ಕುಮಾರಿ ಇಂದ್ರ, ಲೋಕೇಶ್ ಸುವರ್ಣ, ರವೀಂದ್ರ, ಲೆಕ್ಕಪರಿಶೋಧಕ ಸದಾಶಿವ ಪುತ್ರನ್‌, ಶಾಖಾ ವ್ಯವಸ್ಥಾಪಕರಾದ ಮೋಹನ್ ಜಿ. ಮೂಲ್ಯ, ಸಪ್ಪಾ ಕಾಜವ, ಜೀತೇಶ್ ಕುಮಾರ್ ಜೈನ್, ನಿಶಾ ಶ್ರವಣ್, ಸಿಬ್ಬಂದಿಗಳಾದ ದಿವಾಕರ್, ಸಂದೇಶ್, ಉಪಸ್ಥಿತರಿದ್ದರು

Leave a Comment