ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ)ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಇದರ ಅಶ್ರಯದಲ್ಲಿ "ಮರಿಯಲದ ನೆಂಪು-ಹಿರಿಯರ ಸಮ್ಮಿಲನ " ಕಾರ್ಯಕ್ರಮವು ಸೆ 3 ರಂದು ಆದಿತ್ಯವಾರ ಕುಲಾಲ ಸಮುದಾಯ ಭವನ ಪೊಸಲ್ಲಿ ಬಂಟ್ವಾಳದಲ್ಲಿ ನಡೆಯಲಿದೆ.
ಬೆಳಿಗ್ಗೆ 9ರಿಂದ ವಾರ್ಷಿಕ ಮಹಾಸಭೆ,ನಂತರ ಹಿರಿಯರ ಸಮ್ಮಿಲನ, 11.30ಯಿಂದ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರಿಗೆ ವಿವಿಧ ಮನೋರಂಜನಾ ಹಾಗೂ ಸ್ಪರ್ಧಾ
ಕಾರ್ಯಕ್ರಮ ನಡೆಯಲಿದೆ.
ಮದ್ಯಾಹ್ನ 1.30ಗೆ ಕುಟುಂಬದ ಸದಸ್ಯರ ಕೈ ಅಡುಗೆಯ 60ಕ್ಕೋ ಹೆಚ್ಚಿನ ರುಚಿಕರವಾದ ಮಳೆಗಾಲದ ಖಾದ್ಯಗಳ ಸಾಮೂಹಿಕ ಸಹಭೋಜನ ನಡೆಯಲಿದೆ ಎಂದು ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















