ಬಂಟ್ವಾಳ:ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸರಿಸುಮಾರು 105 ವರ್ಷಗಳ ಬಳಿಕ ಲೋಕ ಕಲ್ಯಾಣಾರ್ಥವಾಗಿ ಹಾಗೂ ಹಾಗೂ ಸಾನಿಧ್ಯ ವೃದ್ಧಿಗಾಗಿ ಆಯೋಜಿಸಲಾದ ಶತಚಂಡಿಕಾಯಾಗಕ್ಕೆ ಸಕಲ ಸಿದ್ಧತೆ ನಡೆದಿದ್ದು ವೈದಿಕ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ಇದರ ಅಂಗವಾಗಿ ಫೆ.1ರಂದು ಶನಿವಾರ ಬ್ರಹ್ಮಶ್ರೀ ಪೊಳಲಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, 108 ಕಾಯಿಯ ಗಣಪತಿ ಹೋಮ ನಡೆದು,ಪಾರಾಯಣ, ನವಾಕ್ಷರೀ ಜಪಕ್ಕೆ ಚಾಲನೆ ನೀಡಲಾಯಿತು.
ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ 105 ವರ್ಷಗಳ ಹಿಂದೆ ಶತಚಂಡಿಕಾಯಾಗ ನಡೆದಿರುವ ಬಗ್ಗೆ ದೇವಳದ ದಾಖಲೆ ಮತ್ತು ತಿಳಿಸುತ್ತದೆ. ತದನಂತರ ಅದೇ ಮಾದರಿಯಲ್ಲಿ ಲೋಕಕಲ್ಯಾಣಾರ್ಥ ಮತ್ತು ಸಾನಿಧ್ಯ ಶತಚಂಡಿಕಾಯಾಗ ನಡೆಸಲಾಗುತ್ತಿದೆ.
ಮಾ. 4ರ ವರೆಗೆ ವಿವಿಧ ವೈಧಿಕ ವಿಧಿ ವಿಧಾನ, ಹೋಮಾಧಿಗಳು, ಪರಾಯಣಗಳು ನಡೆಯಲಿದ್ದು, ಮಾ.5ರಂದು ಬೆಳಗ್ಗೆ 6 ಗಂಟೆಗೆ ಶತಚಂಡಿಕಾಯಾಗ ಆರಂಭವಾ ಗಲಿದ್ದು,
ಮಧ್ಯಾಹ್ನ ಯಾಗದ ಪೂರ್ಣಾಹುತಿ ಬಳಿಕ ದೇವರಿಗೆ ಮಹಾಪೂಜೆ, ನಡೆಯಲಿದೆ. ಅನ್ನಸಂತರ್ಪಣೆ ಮಾ.6ರಂದು ಸೇವಾರೂಪದ ದೊಡ್ಡ ರಂಗಪೂಜೆ ಉತ್ಸವವು ನಡೆಯಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪಾಡಿ, ದೇವಳದ ಆಡಳಿತ ಮೊಕ್ತಸರ ಡಾ.ಮಂಜಯ್ಯ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳು ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. 25 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಡಿ ಆಗಮಿಸುವ ನಿರೀಕ್ಷೆಯನ್ನು ಸಂಘ ಟಕರು ಹೊಂದಿದ್ದು, ಕ್ಷೇತ್ರದ ಬ್ರಹ್ಮಕಲಶದ ಸಂದರ್ಭದಲ್ಲಿ ದುಡಿದಿರುವ ಸಾವಿರಾರು ಸ್ವಯಂಸೇವಕರು, ವಿವಿಧ ಸಂಘಸಂಸ್ಥೆಗಳು ಸಹಿತ ಭಕ್ತಸಮೂಹ ಸ್ವಯಂಸೇವಕ ತೊಡಗಿಸಿಕೊಳ್ಳಲಿದ್ದಾರೆ.
ಹೊರೆಕಾಣಿಕೆ ಶತಚಂಡಿಕಾಯಾಗದ ಮೆರವಣಿಗೆ: ಶತಚಂಡಿಕಾಯಾಗದ ಪ್ರಯುಕ್ತ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆಯು ಫೆ. 1ರಂದು ಶನಿವಾರ ನಡೆಯಿತು. ವಿವಿಧ ಕಡೆಗಳಿಂದ ಬಂದ ಹೊರೆಕಾಣಿಕೆಯನ್ನು ಪೊಳಲಿ ದ್ವಾರದಿಂದ ಕ್ಷೇತ್ರದ ವರೆಗೆ ಮೆರವಣಿಗೆಯಲ್ಲಿ ತರಲಾಯಿತು.














