Coastal Bulletin

ಮಂಗಳೂರು: ಹೊಯ್ಗಿಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ (ರಿ.) ಇದರ 22ನೇ ವಾರ್ಷಿಕೋತ್ಸವ ಸಮಾರಂಭವು ಮಾ.18 ರಂದು ಶನಿವಾರ ಎಚ್.ಎಫ್.ಸಿ ಇದರ ಆಟದ ಮೈದಾನದಲ್ಲಿ ನಡೆಯಲಿದೆ.

ಸಂಜೆ 5 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು. ಪ್ರಸಾದ ವಿತರಣೆಯ ನಂತರ ರಾತ್ರಿ 7 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು, 

ರಾತ್ರಿ 8 ಗಂಟೆಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಸಹಿತ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ

ಹಾಗೂ 30 ಗಜಗಳ ಅಂಡರ್ ಆರ್ಮ ಪಂದ್ಯಾಟದ ಅಂಕಪಟ್ಟಿಯ ಅಗ್ರ 10 ತಂಡಗಳಿಗೆ ಪ್ರಶಸ್ತಿ ವಿತರಣೆ ನಡೆಯಲಿದ್ದು ನಂತರ ರಾತ್ರಿ 10 ಗಂಟೆಗೆ ಸನ್ನಿಧಿ ಕಲಾವಿದರು (ರಿ.) ಉಡುಪಿ ಇವರಿಂದ ಅಪ್ಪೆ ಮಂತ್ರದೇವತೆ ತುಳು ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment