Coastal Bulletin

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕೆ ಪಿ ಸಿ ಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷ ತೆಯಲ್ಲಿ ನಾವೂರು ಗ್ರಾಮದ ಕೂಡಿಬೈಲ್ ನಲ್ಲಿ ನಡೆಯುವ 12 ನೇ ವರ್ಷದ ಹೊನಲು ಬೆಳಕಿನ ಮೂಡೂರು -ಪಡೂರು ಬಂಟ್ವಾಳ ಕಂಬಳಕ್ಕೆ ಬಿ.ರಮಾನಾಥ ರೈ ಆವರು ಚಾಲನೆ ನೀಡಿದರು.

ಕಂಬಳಾಭಿಮಾನಿಗಳ ನಿರಂತರ ಸಹಕಾರದಿಂದ ಅಚ್ಚುಕಟ್ಟಾಗಿ , ವ್ಯವಸ್ಥಿತ ಮಟ್ಟದಲ್ಲಿ ಬಂಟ್ವಾಳ ಕಂಬಳ ಮಾಡಲು ಸಾಧ್ಯವಾಯಿತು.ಕಂಬಳ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಸಾಗುತಿದ್ದು ,ತಾಲೂಕಿನ ಕೊನೆಯ ಕಂಬಳ ಬಂಟ್ಚಾಳ ಕಂಬಳವಾಗಿದ್ದು, ಇದೊಂದು ದಾಖಲೆಯನ್ನು ಹೊಂದುವ ರೀತಿಯಲ್ಲಿ ಅತ್ಯಂತ ಉತ್ತಮ ರೀತಿಯಲ್ಲಿ ಮಾಡಲಾಗುತ್ತದೆ.ಈ ಸಂದರ್ಭದಲ್ಲಿ ಹಗಲಿರುಳು ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಈ ಸಂದರ್ಭದಲ್ಲಿ ಅಲ್ಲಿಪಾದೆ ಚರ್ಚ್ ನ ಧರ್ಮಗುರು ಫೆಡ್ರಿಕ್ ಮೊಂತೆರೋ , ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್, ಕಾರ್ಯಧ್ಯಕ್ಷರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಚಾಲಕರಾದ ಬಿ ಪದ್ಮಶೇಖರ ಜೈನ್, ಕಂಬಳ ಸಮಿತಿ ಪ್ರಮುಖರಾದ ಎಡ್ತುರು ರಾಜೀವ ಶೆಟ್ಟಿ, ಫಿಲಿಪ್ ಫ್ರಾಂಕ್,ಮಾಯಿಲಪ್ಪ ಸಾಲ್ಯಾನ್, ಬೇಬಿ ಕುಂದರ್,ಸುದೀಪ್ ಕುಮಾರ್

ಶೆಟ್ಟಿ,ಮಹಮ್ಮದ್ ಶರೀಪ್, ಚಿತ್ತರಂಜನ್ ಶೆಟ್ಟಿ ಬೊಂಡಾಲ,ಸುದರ್ಶನ್ ಜೈನ್,ಜೆಸಿಂತಾ ಡಿಸೋಜ, ಲಿಯೋ ಫರ್ನಾಂಡೀಸ್, ಪದ್ಮನಾಭ ರೈ, ಅಬ್ಬಾಸ್ ಆಲಿ, ಎಂ.ಚಂದ್ರಶೇಖರ ಪೂಜಾರಿ, ಮಹಾಬಲ ಆಳ್ವ ಕಮ್ಮಾಜೆ ದೇವಿಪ್ರಸಾದ್ ಪೂಂಜ, ಎಂ.ಎಸ್.ಮೊಹಮ್ಮದ್, ಜೋಕಿಂ ಮಿನೇಜಸ್, ಉಮೇಶ್ ಕುಲಾಲ್, ಜಯಪ್ರಕಾಶ್ ಶೆಟ್ಟಿ, ಜಿನರಾಜ ರೈ ಅರಿಗ, ಜಯಂತಿ ಪೂಜಾರಿ, ಸದಾಶಿವ ಬಂಗೇರ, ಲವಿನಾ ವಿಲ್ಮ ಮೆನೇಜಸ್, ಜಗದೀಶ್ ಕೊಯಿಲ, ಮಲ್ಲಿಕಾ ಶೆಟ್ಟಿ, ಅಬೂಬಕ್ಕರ್ ಸಿದ್ದೀಕ್, ಸಂಪತ್ ಕುಮಾರ್ ಶೆಟ್ಟಿ, , ಜನಾರ್ದನ ಚಂಡ್ತಿಮಾರ್, ವೆಂಕಪ್ಪ ಪೂಜಾರಿ, ,ಮೆಲ್ ರಾಯ್ ಡಿಸೋಜ, ಸುರೇಶ್ ಜೋರ, ಬಾಲಕೃಷ್ಣ ಆಳ್ವ ಕೊಡಾಜೆ , ಪರಮೇಶ್ವರ ಮೂಲ್ಯ,ಕಾಂಚಲಾಕ್ಷಿ, ಜಯಪ್ರಕಾಶ್ ರೈ, ಪ್ಲೋಸಿ ಡಿಸೋಜ,ಸುವರ್ಣ ಕುಮಾರ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment