ಮೂಡುಬಿದಿರೆ : ಯುವ ಉದ್ಯಮಿ ಜಿ.ಕೆ ಡೆಕೋರೇಟರ್ಸ್, ಜಿ ಕೆ ಗಾರ್ಡನ್ ಸಿಟಿ ಮಾಲಕ ಗಣೇಶ್ ಕಾಮತ್(46ವ) ಶುಕ್ರವಾರ ಸ್ವಗೃಹದಲ್ಲಿ ಹೃದಯಘಾತದಿಂದ ನಿಧನ ಹೊಂದಿದರು. ಬೆಳಗ್ಗಿನ ಜಾವ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಕಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆತರಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು. ಅವರು ಪತ್ನಿ,ಪುತ್ರಿ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.
ವೃತ್ತಿ ಜೀವನದಲ್ಲಿ ಎರಡು ದಶಕಗಳ ಹಿಂದೆ ವಿದ್ಯುತ್ಆಘಾತಕ್ಕೆ ತುತ್ತಾಗಿ ಗಂಭೀರವಾಗಿ ಗಾಯಗೊಂಡು ಎರಡೂ ಕೈಗಳನ್ನು ಕಳಕೊಂಡಿದ್ದ ಅವರು ಛಲ ಮತ್ತು ಆತ್ಮ ವಿಶ್ವಾಸದಿಂದ ಡೆಕೋರೇಶನ್, ಎರೇಂಜರ್ಸ್ ಕ್ಷೇತ್ರದಲ್ಲಿ ಯಶಸ್ವೀ ಯುವ ಉದ್ಯಮಿಯಾಗಿ ಬೆಳೆದು ಎಲ್ಲರನ್ನೂ ಬೆರಗಾಗಿಸಿದ್ದರು. ತನ್ನ ಜಿ.ಕೆ. ಸ್ವ ಉದ್ಯಮ ಸಂಸ್ಥೆಗಳ ಮೂಲಕ ಬಹಳಷ್ಟು ಕುಟುಂಬಗಳಿಗೆ ಉದ್ಯೋಗದಾತರಾಗಿ, ಸೃಜನಶೀಲ ಚಿಂತನೆಗಳ ಮೂಲಕ ಅಲಂಕಾರ, ವೇದಿಕೆಗಳು, ವಿನ್ಯಾಸಗಳಲ್ಲಿ ಗಮನ ಸೆಳೆದು ಧರ್ಮ ಸಂಸದ್,ಜಿ.ಎಸ್.ಬಿ. ವಿಶ್ವ ಸಮ್ಮೇಳನ, ನವೋದಯ ಸಮಾವೇಶ ಹೀಗೆ ಹಲವಾರು ಬೃಹತ್ ಸಮಾವೇಶ, ಸಮಾರಂಭಗಳನ್ನು ಯಶಸ್ವೀಯಾಗಿ ಆಯೋಜಿಸುವಲ್ಲಿ ತೆರೆಮರೆಯಲ್ಲಿ ಶ್ರಮಿಸಿದ್ದರು.
ದುರಂತ ನಾಯಕ: ಇಲ್ಲಿನ ಪೊನ್ನೆಚ್ಚಾರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಎಂ.ಪಿ. ಕಾಮತ್ ಮನೆತನಕ್ಕೆ ಸೇರಿದ ಗಣೇಶ್ ಕಾಮತ್ ಎಳೆಯ ವಯಸ್ಸಿನಲ್ಲೇ ಶಾಮಿಯಾನ, ಡೆಕೊರೇಶನ್ ಉದ್ಯಮಕ್ಕೆ ಸಹಾಯಕರಾಗಿ ಸೇರಿಕೊಂಡಿದ್ದರು. 2001ರಲ್ಲಿ ಕಾರ್ಕಳದ ಮೈದಾನದಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಮಾಡುತ್ತಿದ್ದ ವೇಳೆಗೆ ಹೈಟೆನ್ಶನ್ ವಿದ್ಯುತ್ ತಂತಿಗೆ ತಾಗಿ ಸುಟ್ಟು ಹೋದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ತಿಂಗಳಿಗೂ ಅಧಿಕ ಚರ್ಮದ ಕಸಿ ಚಿಕಿತ್ಸೆ ಪಡೆದು ಬದುಕಿ ಉಳಿದರೂ ಕರಟಿ ಹೋಗಿದ್ದ ಕೈಗಳೆರಡನ್ನೂ ಕಳೆದುಕೊಂಡಿದ್ದರು. ನಂತರದ ದಿನಗಳಲ್ಲಿ ಮೂಡುಬಿದಿರೆಯ ರೋಟರಿ ಕ್ಲಬ್ ಅವರಿಗೆ ಕೃತಕ ಕೈಗಳೆರಡನ್ನೂ ಜೋಡಿಸುವಲ್ಲಿ ನೆರವಾಗಿತ್ತು.
ನಿರಾಶೆಯ ನಡುವೆಯೂ ಆತ್ಮವಿಶ್ವಾಸದೊಂದಿಗೆ ಬೆಳೆದ ಗಣೇಶ್ ಕಾಮತ್ ತನ್ನದೇ ಸಣ್ಣ ಉದ್ಯಮ ತಂಡ ಕಟ್ಟಿಕೊಂಡು ನಿದರ್ೇಶಿಸಿ ಜಿ.ಕೆ. ಡೆಕೋರೇಟರ್ಸ್ ಸಂಸ್ಥೆಯನ್ನು ಬೆಳೆಸಿ ಹಲವರಿಗೆ ಬದುಕು ಕಟ್ಟಿಕೊಟ್ಟರು. ಪಡುಮಾನರ್ಾಡಿನಲ್ಲಿ ಆರು ವರ್ಷಗಳ ಹಿಂದೆ ಜಿ.ಕೆ.ಗಾರ್ಡನ್ ಸಿಟಿ ಸಭಾಂಗಣ ರೂಪಿಸಿ ಕೋವಿಡ್ ಸಮಯದಲ್ಲಂತೂ ಅತ್ಯಂತ ರಿಯಾಯಿತಿ ದರದಲ್ಲಿ ಸರಳ ಮದುವೆಗಳನ್ನು ಪ್ರೋತ್ಸಾಹಿಸಿದ್ದರು. ಈ ನಡುವೆ ಸಂಸ್ಥೆಯ ಸಿಬ್ಬಂದಿಯಾಗಿದ್ದ ಲತಾ ಅವರು
ಬಾಳ ಸಂಗಾತಿಯಾಗಿ ಗಣೇಶ್ ಅವರ ಬದುಕನ್ನು ಆಧರಿಸಿ ಬೆಳಗಿದ್ದು ವಿಶೇಷ. ಓರ್ವ ಛಲವಾದಿಯಾಗಿ, ವೃತ್ತಿ ಜೀವನದಲ್ಲಿ ನಂತರ ಆತ್ಮವಿಶ್ವಾಸದ ಯಶಸ್ಸಿನ ಹೆಜ್ಜೆಗಳೊಂದಿಗೆ ಮುನ್ನಡೆದ ಗಣೇಶ್ ಕಾಮತ್ ತನ್ನ ಸಭೆ, ಸಮಾರಂಭ, ಸಮಾವೇಶಗಳ ನಿರ್ವಹಣೆಯ ಉದ್ಯಮ ವಿಶೇಷತೆಯಿಂದ ರಾಜ್ಯಮಟ್ಟದಲ್ಲೇ ಮನ್ನಣೆ ಗಳಿಸಿದ್ದರು. ಊರ ಪರವೂರ ಕಾರ್ಯಕ್ರಮಗಳಿಗೆ ಸದಾ ರಿಯಾಯಿತಿ ದರದಲ್ಲಿ ವ್ಯವಸ್ಥೆ ಮಾಡಿ ಪ್ರೋತ್ಸಾಹಿಸುತ್ತಿದ್ದರು.
ಮೂಡುಬಿದಿರೆ ಘಟಕದ ಶಾಮಿಯಾನ ಮಾಲಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದ ಅವರು ಪ್ರಸ್ತುತ ಗೌರವಾಧ್ಯಕ್ಷರಾಗಿದ್ದರು. ಪೌರಾಣಿಕ ಕಲ್ಪನೆಯ ಸ್ಥಬ್ಧಚಿತ್ರಗಳ ಮೂಲಕ ಧಾಮರ್ಿಕ ಮೆರವಣಿಗೆಗಳಲ್ಲಿ ಮೆರುಗು ತುಂಬಿದ್ದ ಅವರು ಹಲವು ವರ್ಷಗಳಿಂದ ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೂತರ್ಿಯನ್ನಿರಿಸುವ ಟ್ರಕ್ ಅಲಂಕಾರ, ಕಳೆದ ಉತ್ಸವದಲ್ಲಿ ಒಳಾಂಗಣದ ದಬರ್ಾರ್ ವಿನ್ಯಾಸ, ಒಂಟಿಕಟ್ಟೆಯ ಗಣೇಶೋತ್ಸವ ಟ್ಯಾಬ್ಲೋ ತಯಾರಿಯಲ್ಲಿ ಗುರುತಿಸಿಕೊಂಡಿದ್ದರು. ಬೆದ್ರದ ಬಿಸರ್ೆ (2016) ಗೌರವ. ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ (2017) ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ಬಹಳಷ್ಟು ಗೌರವ, ಸಮ್ಮಾನಗಳು ಅವರಿಗೆ ಸಂದಿವೆ. .
ಅವರ ನಿಧನಕ್ಕೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಿಥುನ್ ರೈ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆವಿ, ಉದ್ಯಮಿ ಕೆ. ಶ್ರೀಪತಿ ಭಟ್, ನಾರಾಯಣ ಪಿ.ಎಂ. ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಅವರ ನಿವಾಸಕ್ಕೆ ತೆರಳಿದವರು ಅಂತಿಮ ನಮನ ಸಲ್ಲಿಸಿದರು. ಬಳಿಕ ಅಂತಿಮ ಯಾತ್ರೆಯ ಸಂದರ್ಭದಲ್ಲಿ ಲಾವಂತ ಬೆಟ್ಟು ರಸ್ತೆಯಲ್ಲಿರುವ ಅವರ ಸಂಸ್ಥೆಯ ಆವರಣದಲ್ಲೂ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಅವಕಾಶ ನೀಡಲಾಯಿತು.















