ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟಕ್ ವಿಭಾಗದ ಅಧ್ಯಕ್ಷರಾದ ಡಾ.ಜಿ. ಸಂಜೀವ್ ರೆಡ್ಡಿ ಅವರ ಆದೇಶ, ರಾಷ್ಟ್ರೀಯ ಇಂಟಕ್ ವರಿಷ್ಠರಾದ ಎನ್.ಎಂ. ಅಡ್ಯಂತಾಯ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಅವರ ಅನುಮತಿ ಮೇರೆಗ ದ.ಕ. ಜಿಲ್ಲಾ ಇಂಟಕ್ ವಿಭಾಗದ ಜಿಲ್ಲಾಧ್ಯಕ್ಷರಾಗಿ ಚಿತ್ತರಂಜನ್ ಶೆಟ್ಟಿ ಬೊಂಡಾಲ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಲಾಗಿದೆ
ಜಿಲ್ಲಾ ಇಂಟಕ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯುವ ಕಾಂಗ್ರೆಸ್ ನೇತಾರ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಈ ಅಧ್ಯಕ್ಷ ಪದವಿ ಬಹಳ ಹೂವಿನ ಹಾಸಿಗೆಯ ಅಥವಾ ಮುಲ್ಲಿನ ಹಾಸಿಗೆಯ ಎಂಬುದು ಬಹಳ ಚರ್ಚೆಯ ವಿಷಯವಾಗಿದೆ.
ಹೌದು ಎಂದು ಹೇಳುತ್ತಿವೆ ಇಂಟಕ್ ಮತ್ತು ಕಾಂಗ್ರೆಸ್ಸಿನ ಹಿರಿಯ ನಾಯಕರು, ರಾಕೇಶ್ ಮಲ್ಲಿಯ ಜೊತೆಯಲ್ಲಿ ಇಂಟಕ್ ಜಿಲ್ಲೆಯಲ್ಲಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ,ಸದಾಶಿವ ಶೆಟ್ಟಿ, ಸಸಿ ರಾಜ್ಅಂಬಾಟ್, ಸುರೇಶ್ ಪಿಕೆ, ಸಿಎ ರಹೀಮ್, ಅವರ ಸಾಲಿನಲ್ಲಿ ಚಿತ್ತರಂಜನ ಶೆಟ್ಟಿಯೂ ಪ್ರಾಮಾಣಿಕ ಪ್ರಯತ್ನ,ಅವಿರತ ಶ್ರಮ ವಹಿಸಿದ ಪರಿಣಾಮ ಪ್ರಬಲವಾಗಿ ಸಂಘಟನೆಯಾಗಿ ಬೆಳೆಯಲು ಸಹಕಾರಿಯಾಯಿತು.
ಜಿಲ್ಲೆಯ ಉದ್ದಗಲಕ್ಕೂ ಪಕ್ಷದ ಮತ್ತು ಇಂಟಕ್ ಸಂಘಟನೆಯ ಕಾರ್ಯಕರ್ತರ ಪರಿಚಯ ಇರುವ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬೊಂಡಾಲ ಜಗನ್ನಾಥ ಶೆಟ್ಟಿ ಅವರ ಪಟ್ಟ ಶಿಷ್ಯ. ಇದೇ ಕಾರಣದಿಂದ ಚಿತ್ತರಂಜನ್ ಶೆಟ್ಟಿ ಅವರನ್ನು ಇಂಟಕ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರ ಪರಿಣಾಮ ಜಿಲ್ಲೆಯಲ್ಲಿ ಸಂಘಟನೆ ಪ್ರಬಲವಾಗಿ ಬೆಲೆಯಿತು,ಅದರೊಂದಿಗೆ ತನ್ನ ನಿಷ್ಠಾವಂತ ಪಕ್ಷದ ಕೆಲಸಕ್ಕಾಗಿ ಪಕ್ಷವು ಕೆಪಿಸಿಸಿ ಮಟ್ಟದ ಸಂಯೋಜಕರನ್ನಾಗಿಯೂ ಮಾಡಿತು ಈಗ ತಾನೇ ಅಡ್ಡಂತಾಯರು ಜಿಲ್ಲಾಧ್ಯಕ್ಷರನ್ನಾಗಿಯೂ ಮಾಡಿ ಗ್ರಾಮೀಣ ಪ್ರದೇಶದ ಯುವ ಪ್ರತಿಭೆ ಜಿಲ್ಲೆಯ ಕಾರ್ಮಿಕ ವರ್ಗದ ಪ್ರತಿಷ್ಠೆಯ ಅಧ್ಯಕ್ಷರನ್ನಾಗಿ
ಮಾಡಿದ್ದರಿಂದ ಕಾರ್ಮಿಕರಲ್ಲಿ ಹೊಸ ಚೈತನ್ಯ ಮೂಡಿದಂತಾಗಿದೆ,
ಇಂದು ಇಂಟಕ್ ಸಂಘಟನೆಯ ನಾಯಕರುಗಳು ತಮ್ಮ ಸ್ವ ಪ್ರತಿಷ್ಠೆಯನ್ನು ಬದಿಗಿಟ್ಟು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ನ ಹಿತಕ್ಕಾಗಿ ಹಾಗೂ ಕಾರ್ಮಿಕರ ಒಳಿತಿಗೋಸ್ಕರ ನೂತನ ಅಧ್ಯಕ್ಷರಾದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಬೆನ್ನೆಲುಬಾಗಿ ನಿಂತು ಮತ್ತೊಮ್ಮೆ ಜಿಲ್ಲೆಯಲ್ಲಿ ಪ್ರಬಲವಾದ ಸಂಘಟನೆಯಾಗಿ ಹೊರಒಮ್ಮಲು ಸಂಪೂರ್ಣ ಸಹಕಾರ ನೀಡಿದ್ದಾರೆ .
ಒಂದು ಕಾಲದ ಬದ್ಧ ವೈರಿಗಳಾದ ರಮನಾಥ ರೈಹಾಗೂ ರಾಕೇಶ್ ಮಲ್ಲಿ ಇಬ್ಬರು ಬಂಟ ನಾಯಕರನ್ನು ಒಂದು ಮಾಡುವಲ್ಲಿ ಬೊಂಡಾಲ ಚಿತ್ತರಂಜನ್ ಶೆಟ್ಟಿ,ಪ್ರಮುಖ ಪಾತ್ರ ವಹಿಸಿದ್ದರು ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ,
ಡಿಪ್ಲೋಮಾ ಪದವಿಯನ್ನು ಪಡೆದಿರುವ ಚಿತ್ತರಂಜನ್ ಶೆಟ್ಟಿ ಯವರು ತಳಮಟ್ಟದಿಂದ ಬೆಳೆದು ಹಂತ ಹಂತವಾಗಿ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮವಾಗಿ, ಅವರ ಕಾರ್ಯಕ್ಷಮತೆ, ಪ್ರಾಮಾಣಿಕತೆ,ನಾಯಕತ್ವ ಗುಣ ನೋಡಿ ಇದೀಗ ಇಂಟಕ್ ಜಿಲ್ಲಾಧ್ಯಾಕ್ಷ ಸ್ಥಾನವನ್ನು ನೀಡಿ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿತ್ತಾರೆ ಎನ್ನುವ ವಿಶ್ವಾಸ ಕಾಂಗ್ರೆಸ್ ಪಾಲಯದಲ್ಲಿ ವ್ಯಕ್ತ ವಾಗಿದೆ .
ಈ ಬಗ್ಗೆ ಚಿತ್ತರಂಜನ್ ಶೆಟ್ಟಿ ಯವರನ್ನು ಸಂಪರ್ಕಿಸಿದಾಗ, ಈ ಸವಾಲಿನ ಪದವಿಯನ್ನು ತನ್ನ ರಾಜಕೀಯ ಅನುಭವ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ, ಇಂಟಕ್ ಸಂಘಟನೆಯ ಸರ್ವ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು,ಅವರ ಸಲಹೆ ಸಹಕಾರವನ್ನು ಪಡೆದು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
.














