ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ ಇವರ ಆಶ್ರಯದಲ್ಲಿ ಜ। ಕೆ. .ಎಸ್ ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಎ.ಬಿ. ಶೆಟ್ಟಿ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆ ಇವರ ಸಹಯೋಗದಲ್ಲಿ ಪ್ರತಿ ತಿಂಗಳ ಮಂಗಳವಾರ ನಡೆಯುವ 747ನೇ ಉಚಿತ ಕಣ್ಣು-ದಂತ-ವೈದ್ಯಕೀಯ ಶಿಬಿರವು ಜನವರಿ : 2, 9, 16, 23, 30 ರಂದು ಬೆಳಿಗ್ಗೆ ಗಂಟೆ 9-00ರಿಂದ 1-00ರ ವರೆಗೆ ಸೇವಾಂಜಲಿ ಆರೋಗ್ಯ ಕೇಂದ್ರ, ಫರಂಗಿಪೇಟೆಯಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ಕಣ್ಣಿನ ತಜ್ಞ ವೈದ್ಯರು,ಸಾಮಾನ್ಯ ರೋಗ ತಜ್ಞ ವೈದ್ಯರು,ದಂತ ತಜ್ಞ ವೈದ್ಯರು,ಚರ್ಮ ರೋಗ ತಜ್ಞ ವೈದ್ಯರು,ಮಕ್ಕಳ ತಜ್ಞ ವೈದ್ಯರು,ಸ್ತ್ರೀ ರೋಗ ತಜ್ಞ ವೈದ್ಯರು,ಕಿವಿ, ಮೂಗು, ಗಂಟಲು ತಜ್ಞ ವೈದ್ಯರು ಲಭ್ಯವಿರುವರು.
ಈ ಶಿಬಿರದಲ್ಲಿ ರೋಗ ಪತ್ತೆ ಹಚ್ಚಿದಲ್ಲಿ ಆಸ್ಪತ್ರೆ ಯ ಸೌಲಭ್ಯಗಳನ್ನು ಆಸ್ಪತ್ರೆಯ ಕಾರ್ಡಿನ
ಮುಖಾಂತರ ವಿಶೇಷ ರಿಯಾಯಿತಿ ದರದಲ್ಲಿ ಒದಗಿಸುವ ವ್ಯವಸ್ಥೆ ಇದೆ. ಕಣ್ಣಿನ ಶಸ್ತ್ರ ಚಿಕಿತ್ಸೆ, ಹೆರಿಗೆ, ಸಿಜೇರಿಯನ್ ಹೆರಿಗೆ ಮತ್ತು ಸೀಳು ತುಟಿ ವಿಕಲಾಂಗತೆಗಳನ್ನು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು.
ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ,ಕೆ. ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














