ಅಯೋಧ್ಯ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠೆಗೆ ಬಾಲರಾಮನ ವಿಗ್ರಹ ಯಾವುದೆಂದು ಇನ್ನೂ ನಿರ್ಧಾರವಾಗಿಲ್ಲ,ಜ. 17ರಂದು ಘೋಷಣೆ ಆಗಲಿದೆ. ಎರಡು ಕರಿ, ಒಂದು ಅಮೃತಶಿಲೆ ಮೂರ್ತಿ ನಿರ್ಮಾಣವಾಗಿದೆ. ಪರಿಶೀಲಿಸಿ ಅಂತಿಮವಾಗಿ ನಿರ್ಧರಿ ಸಲಿದ್ದು, ಸರಯೂ ನದಿಯ ಅಭಿಷೇಕದ ದಿನ ಆಯ್ಕೆ ಮಾಡಲಾಗುತ್ತದೆ ಎಂದು 'ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಬುಧವಾರ ಮಾಧ್ಯಮ ದವರೊಂದಿಗೆ ಮಾತನಾಡಿ ಹೇಳಿದರು.
ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ. ಭಕ್ತರು ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದವರು ಮುಂದಿನ ದಿನದಲ್ಲಿ ಅಯೋಧ್ಯೆಗೆ ಹೋಗಬೇಕು. ಅಲ್ಲಿ ಈಗಾಗಲೇ ಟೆಂಟ್, ಶೆಡ್ ತಯಾರಾ ಗಿದೆ. ಧನುರ್ಮಾಸದ ಕಾರಣ ಹೊರಗೆ ಮಲಗಲು ಸಾಧ್ಯವಿಲ್ಲ ಎಂದರು.
ಹುಬ್ಬಳ್ಳಿ ಕರಸೇವಕರ ಪ್ರಕರಣ ತೆರೆದಿರುವುದಕ್ಕೆ
ಅಸಮಾಧಾನ ವ್ಯಕ್ತಪ ಡಿಸಿದ ಶ್ರೀಗಳು, ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂದಿನ ಕರಸೇವಕರನ್ನು ಬಂಧಿಸಲಾ ಗಿದೆ. ಇದು ಹಿಂದೂಗಳನ್ನು ಮಟ್ಟ ಹಾಕುವ ಪ್ರಯತ್ನ ಎಂದು ಭಾವಿಸ ತ್ತೇವೆ. ಇಂತಹ ಕಾಲದಲ್ಲಿ ಇದು ಏಕೆ? ಈ ಬಗ್ಗೆ ಗೊಂದಲವಾಗದಂತ ಸರಕಾರ ಮುಂಜಾಗ್ರತೆ ವಹಿಸಬೇಕು ಎಂದರು.














