ಬಂಟ್ವಾಳ: ಇಲ್ಲಿನ ತುಂಬೆ ನಿವಾಸಿ, ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ವಿಶ್ವ ಕೊಂಕಣಿ ಸರ್ದಾರ್ ಎಂದೇ ಗುರುತಿಸಿಕೊಂಡಿದ್ದ ಬಸ್ತಿ ವಾಮನ ಶೆಣೈ( 88) ಇವರ ಅಂತ್ಯಕ್ರಿಯೆ ಬಂಟ್ವಾಳ ಬಡ್ಡಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ನೆರವೇರಿತು
ಗೌಡಸಾರಸ್ವತ ಬ್ರಾಹ್ಮಣದ ಪದ್ದತಿಯಂತೆ ಅಂತ್ಯ ಸಂಸ್ಕಾರ ನಡೆಯಿತು. ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಚಂದ್ರಪ್ರಕಾಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಬಿ.ತುಂಬೆ, ಕಸಾಪ ಜಿಲ್ಲಾಧ್ಯಕ್ಷ ಶ್ರೀನಾಥ್ ಉಜಿರೆ ಮತ್ತಿತರರು ಪಾಲ್ಗೊಂಡು ಅಂತಿಮ ವನಮನ ಸಲ್ಲಿಸಿದರು.














