ಬಂಟ್ವಾಳ ತಾಲ್ಲೂಕಿನ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಕಾನೂನು ಕಾರ್ಯಗಾರದಲ್ಲಿ ಹಿರಿಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಬಂಟ್ವಾಳ: ಇಲ್ಲಿನ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಕಾನೂನು ಕಾರ್ಯಗಾರದಲ್ಲಿ ಹಿರಿಯ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಬಾಲ ಗೋಪಾಲಕೃಷ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಬಿ. ಗಣೇಶಾನಂದ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ರಮ್ಯಾ, ಶಿಲ್ಪಾ ಜಿ. ತಿಮ್ಮಾಪುರ
ಇದ್ದರು. ಇದೇ ವೇಳೆ ಹಿರಿಯ ಸಿಬ್ಬಂದಿಗಳಾದ ಪ್ರಭಾಕರ ಆಚಾರ್, ರವೀಂದ್ರ ಉಳ್ಳಾಲ್, ಜಯರಾಮ್ ಇವರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ವಕೀಲ ಎಂ. ಅಶ್ವಿನಿ ಕುಮಾರ್ ರೈ ಇವರು ಕಾನೂನು ಬಗ್ಗೆ ಮಾಹಿತಿ ನೀಡಿದರು. ವಕೀಲ ರವೀಂದ್ರ ಕುಕ್ಕಾಜೆ ಸ್ವಾಗತಿಸಿ, ರಾಧಿಕಾ ವಂದಿಸಿದರು. ವಕೀಲರಾದ ಗಿರೀಶ್ ಮುಳಿಯಾಲ ಕಾರ್ಯಕ್ರಮ ನಿರೂಪಿಸಿದರು.














