ಮಂಗಳೂರು : ಚಲಿಸುತ್ತಿರುವ ರೈಲಿಗೆ ಹತ್ತುವಾಗ ಕಾಲು ಜಾರಿ ಬಿದ್ದ ವಿದ್ಯಾರ್ಥಿನಿಯನ್ನು ಸಿನೀಮೀಯ ರೀತಿಯಲ್ಲಿ ರಕ್ಷಣೆ ಮಾಡಿದ ಘಟನೆ ಮಂಗಳೂರು ರೈಲ್ವೆ ಸ್ಟೇಷನ್ ನಲ್ಲಿ ನಡೆದಿದೆ.ಮಂಜೇಶ್ವರ ಮೂಲದ ಬಡಾಜೆ ಕೃಷ್ಣ ಮೂಲ್ಯರ ಪುತ್ರ ಮನೀಶ್ ಕುಲಾಲ್ ರಕ್ಷಣೆ ಮಾಡಿದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.
ಕಾರ್ ಸ್ಟ್ರೀಟ್ ರೈಲ್ವೆ ಸ್ಟೇಷನ್ ನಲ್ಲಿ ಸಂಜೆ ವಿದ್ಯಾರ್ಥಿನಿಯೋರ್ವಳು ಚಲಿಸುತ್ತಿರುವ ರೈಲಿಗೆ ತನ್ನ ಎರಡು ಕಾಲುಗಳನ್ನು ಏಕ ಕಾಲದಲ್ಲಿ ರೈಲಿನಲ್ಲಿಟ್ಟಾಗ ಆಯ ತಪ್ಪಿ ಬೀಳುತ್ತಿರುವ
ಸಂದರ್ಭದಲ್ಲಿ ಮನೀಶ್ ಕುಲಾಲ್ ರಕ್ಷಿಸಿ ಮುಂದೆ ಆಗ ಬಹುದಾದ ದೊಡ್ಡ ದುರಂತವನ್ನು ತಪ್ಪಿಸಿ ಎಲ್ಲರ ಪ್ರಶಂಸೆಗೆ ಕಾರಣನಾಗಿದ್ದಾನೆ.ಈತ ಮಂಗಳೂರಿನ ಕಾರ್ ಸ್ಟ್ರೀಟ್ ಕಾಲೇಜಿನ ವಿದ್ಯಾರ್ಥಿ.














