ಬಡಗಬೆಳ್ಳೂರು:ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ,ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಭೆ ಬ್ರಹ್ಮಕಲಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರಘು ಎಲ್. ಶೆಟ್ಟಿ ಬೆಳ್ಳೂರು ಆಯ್ಕೆ.

Coastal Bulletin
ಬಡಗಬೆಳ್ಳೂರು:ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ,ಬ್ರಹ್ಮಕಲಶೋತ್ಸವದ ಪೂರ್ವ ಭಾವಿ ಸಭೆ ಬ್ರಹ್ಮಕಲಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರಘು ಎಲ್. ಶೆಟ್ಟಿ ಬೆಳ್ಳೂರು ಆಯ್ಕೆ.

ಬಂಟ್ವಾಳ :ತಾಲೂಕಿನ ಬಡಗಬೆಳ್ಳೂರಿನಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯು ಭುವನೇಶ್ ಪಚಿನಡ್ಕ ಇವರ ಅಧ್ಯಕ್ಷತೆಯಲ್ಲಿ ನ.2ರಂದು ಭಾನುವಾರ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪ್ರತಿಯೊಬ್ಬ ಭಕ್ತಾಧಿಗಳು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾಗಲು ದೇವಸ್ಥಾನದ ಗರ್ಭಗುಡಿಯ ಮೇಲ್ಚಾವಣಿಗೆ ತಾಮ್ರದ ಕವಚ ಅಳವಡಿಸಲು 2.500 ಸಾವಿರದ ರಸೀದಿ ಬಿಡುಗಡೆ ಮಾಡಲಾಯಿತು.


ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ ಜೀರ್ಣೋದ್ಧಾರ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪಾಡಿ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನಾರಾಯಣ್ ನಾಯಕ್, ಉದ್ಯಮಿ ಉಮೇಶ್ ಸಾಲಿಯಾನ್ ಬೆಂಜನಪದವು, ದೇವಪ್ಪ ಪೂಜಾರಿ ಬಾಳಿಕೆ, ಅರ್ಚಕರಾದ ರಮೇಶ್ ಪೂಜಾರಿ, ಶ್ರೀ ಆದಿಶಕ್ತಿ ಚಾಮುಂಡೆಶ್ವರಿ ದೇವಸ್ಥಾನ ಸೇವಾ

ಟ್ರಸ್ಟ್ನ ಟ್ರಸ್ಟಿಗಳಾದ ವಸಂತ ಎಂ. ಬೆಳ್ಳೂರು, ಸಂದೀಪ್ ಸದಾಶಿವ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು. ಶಶಿಕಿರಣ್ ಬೆಳ್ಳೂರು ಸ್ವಾಗತಿಸಿ, ವಂದಿಸಿದರು. ದಿನೇಶ್ ವರಕೋಡಿ ಕಾರ್ಯಕ್ರಮ ನಿರೂಪಿಸಿದರು. 

ಬ್ರಹ್ಮಕಲಶೋತ್ಸವದ ಸಮಿತಿ ರಚನೆ:

ಈ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ರಘು ಎಲ್. ಶೆಟ್ಟಿ ದೇವಸ್ಯ, ಕಾರ್ಯಾಧ್ಯಕ್ಷರಾಗಿ ಉಮೇಶ್ ಸಾಲಿಯಾನ್ ಬೆಂಜನಪದವು, ಪ್ರಧಾನ ಕಾರ್ಯದರ್ಶಿಯಾಗಿ ದೇವಪ್ಪ ಪೂಜಾರಿ ಕಾರ್ಯದರ್ಶಿಯಾಗಿ ಪ್ರಸಾದ್ ಗರೋಡಿ ಜತೆ ಕಾರ್ಯದರ್ಶಿಯಾಗಿ ಯಶೋಧರ ಪೊಳಲಿ ಕೋಶಾಧಿಕಾರಿಯಾಗಿ ರಾಜು ಕೋಟ್ಯಾನ್ ಗರೋಡಿ, ಉಪಾಧ್ಯಕ್ಷರುಗಳಾಗಿ ಉಮೇಶ್ ಆಚರ‍್ಯ, ಯಶವಂತ ಪೊಳಲಿ, ಲಕ್ಷ್ಮೀಶ್ ಶೆಟ್ಟಿ, ರಮೇಶ್ ಪೂಜಾರಿ ಬಟ್ಟಾಜೆ ಇವರನ್ನು ಆಯ್ಕೆ ಮಾಡಲಾಯಿತು.

Leave a Comment