ದೈವ ನರ್ತಕ ಸುರೇಂದ್ರ ಪರವ ಕರಿಯಂಗಳ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Coastal Bulletin
ದೈವ ನರ್ತಕ ಸುರೇಂದ್ರ ಪರವ ಕರಿಯಂಗಳ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಬಂಟ್ವಾಳ:ತಾಲೂಕಿನ ಕರಿಯಂಗಳ ಗ್ರಾಮದ ನಿವಾಸಿ ದೈವ ನರ್ತಕ ಸುರೇಂದ್ರ ಪರವ ಅವರಿಗೆ ದೈವಾರಾಧನೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಬಾರಿ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ದಿ.ಪರಮೇಶ್ವರ ಪರವ ತಾಯಿ ರುಕ್ಷ್ಮಿಣಿ ಇವರ ಪ್ರಥಮ ಮಗನಾಗಿ ಪರವ ಜನಾಂಗದ ಪರಿಶಿಷ್ಟ ಜಾತಿಯವರಾದ ಇವರು ಕುಲ ಕಸುಬು ದೈವ ನರ್ತನವನ್ನು (ಜಾನಪದ) ಸುಮಾರು 20 ವರ್ಷದಿಂದ ಮುಂದುವರಿಸುತ್ತ ಬಂದಿರುತ್ತಾರೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಪದವಿ ವಿಧ್ಯಾಭ್ಯಾಸ ಮುಗಿಸಿ ಪ್ರಸ್ತುತ ಅಮ್ಮುಂಜೆ ಗ್ರಾ ಪಂ ನಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಉದ್ಯೋಗದ

ಜೊತೆ ವಿವಿದ ಗ್ರಾಮ ದೈವಗಳ, ಮನೆ ದೈವಗಳ ನರ್ತಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನಜಾಗೃತಿಗೋಸ್ಕರ ಬೀದಿ ನಾಟಕ ತಂಡದಲ್ಲಿಯು ಸೇವೆ ಸಲ್ಲಿಸಿರುತ್ತಾರೆ,ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕ ವತಿಯಿಂದ ಹಾಗೂ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿರುತ್ತಾರೆ, ಇವರ ದೈವಾರಾಧನೆ ಕ್ಷೇತ್ರದ ಗಣನೀಯ ಸೇವೆಯನ್ನು ಗುರುತಿಸಿ ಅರ್ಹವಾಗಿ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Leave a Comment