ಬಂಟ್ವಾಳ :ನವಂಬರ್ ಒಂದರಂದು ಕೇರಳ ಪಿರವಿ,ಭಾಷಾದಿನವಾಗಿ ಆಚರಿಸುತ್ತಿರುವ ಕೇರಳ ರಾಜ್ಯೋತ್ಸವದಂದು ಕಾಸರಗೋಡು ಜಿಲ್ಲಾಧಿಕಾರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ತುಳು ಕನ್ನಡ ಸಾಹಿತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಇವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್, ಜಿಲ್ಲಾಧಿಕಾರಿ ಇಂಪಶೇಖರ್ ಐ ಎಂ ಎಸ್, ಪಿ.ಬೇಬಿ ಬಾಲಕೃಷ್ಣನ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ರಮೀಜ್ ರಾಜಾ.ಕೆ.ಎ.ಎಸ್, ಶುಭಾ ಒಬ್ಬ.ಸಂಸ್ಕೃತಿಕ ಕಾರ್ಯಕರ್ತೆ,
ಚಲನಚಿತ್ರ ನಟಿ, ಹಾಗೂ ಇನ್ನಿತರ ಗೌರವಾನ್ವಿತ ಅತಿಥಿಗಳು ಉಪಸ್ಥಿತರಿದ್ದರು.
ಮಲಿಯಾಳ ಸಾಹಿತಿ ರವೀಂದ್ರನ್ ಪಾಡಿ ಮತ್ತು ಎಂ.ಪಿ.ದಿಲ್ನಾ ಪರಿಚಯಿಸಿದರು ಮಧುಸೂದನನ್ ಜಿಲ್ಲಾ ಮಾಹಿತಿ ಅಧಿಕಾರಿ ಸ್ವಾಗತಿಸಿ ಎಸ್.ಚಿಲಂಗಾ.ಎ.ಐ.ಒ ವಂದಾನಾರ್ಪಣೆಗೈದರು.















